ಪಿಕಪ್ ವಾಹನ ಪಲ್ಟಿ: ಓರ್ವ ಕಾರ್ಮಿಕ ಮಹಿಳೆ ಸಾವು

0
35

ಯಾದಗಿರಿ: ಹತ್ತಿ ಬಿಡಿಸಲು ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು 12ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ಗುರುಮಠಕಲ್ ಬಳಿಯ ಧರ್ಮಪುರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟಕಲ್ ಗ್ರಾಮದ ನಿವಾಸಿ ಮೊಗಲಮ್ಮ(20) ಮೃತ ಮಹಿಳೆ. ಹತ್ತಿ ಬಿಡಿಸಲು ಕಾರ್ಮಿಕರನ್ನು ಪಿಕಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಗಾಯಾಳು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬಿಜೆಪಿ ಪಕ್ಷಕ್ಕೆ ಕೈಲಾಶ್ ಗೆಹ್ಲೋಟ್ ಸೇರ್ಪಡೆ
Next articleಯೋಗ ಗುರು ಶರತ್ ಜೋಯಿಸ್ ಪಾರ್ಥಿವ ಶರೀರ ಇಂದು ನಗರಕ್ಕೆ