ಪಿಕಪ್ ವಾಹನ ಡಿಕ್ಕಿ: ಮೂವರ ದುರ್ಮರಣ

0
7

ರಾಯಚೂರು: ಹನುಮ ಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ಮಡಿ ನೀರು ತರಲು ಹೊರಟಿದ್ದ ಭಕ್ತರ ಮೇಲೆ ವಾಹನ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಪೆಟ್ರೊ ಕೆಮಿಕಲ್ ಹತ್ತಿರ ಮಂಗಳವಾರ ಬೆಳಗಿನ ಜಾವ ನಡೆದಿದೆ. ಹೆಗ್ಗಸನಹಳ್ಳಿ ಸಮೀಪದ ಎಂಪಿಸಿಎಲ್ ಕಾಲನಿಯ 8-10 ಭಕ್ತರು ನದಿ ನೀರಲು ತರಲು ಪಾದಯಾತ್ರೆ ಮಾಡುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಭಕ್ತರ ಮೇಲೆ ಹರಿದಿದೆ. ಘಟನೆಯಲ್ಲಿ ಅಯ್ಯನಗೌಡ (30), ಮಹೇಶ (30), ಉದಯಕುಮಾರ (30) ಗಂಭೀರ ಗಾಯಗೊಂಡಿದ್ದು, ಶಕ್ತಿನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೂ ಗಾಯಗಳಾಗಿದ್ದು ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೆಲಂಗಾಣ ಮೂಲದ ಜಡಚರ್ಲಾದ ವಾಹನ ಇದಾಗಿದ್ದು, ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಪೊಲೀಸರು ಬೆನ್ನತ್ತಿ ಚಾಲನ ಮಧುಸೂದನ ಗೌಡನನ್ನು ವಶಕ್ಕೆ ಪಡೆದಿದ್ದಾರೆ. ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಬಿಜೆಪಿಯಿಂದ ಸಂಪೂರ್ಣ ನಿರ್ಲಕ್ಷದ ಹಿನ್ನೆಲೆಯಲ್ಲಿ ರಾಜಿನಾಮೆ
Next articleಮಹಿಳೆ ವಿವಸ್ತ್ರ ಪ್ರಕರಣ: ಆರೋಪಿಗಳ ಬಿಡುಗಡೆ, ಸಿಹಿ ಹಂಚಿ ಅದ್ಧೂರಿ ಸ್ವಾಗತ