ಪಶ್ಚಿಮವಾಹಿನಿ ಕೋದಂಡ ರಾಮನ ದೇಗುಲದಲ್ಲಿ‌ ವಿಶೇಷ ಪೂಜೆಯೊಂದಿಗೆ ಭಜನೆ

0
4

ಶ್ರೀರಂಗಪಟ್ಟಣ : ಅಯೋದ್ಯಯಲ್ಲಿನ ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯ ಕಾವೇರಿ‌ ನದಿ ತೀರದಲ್ಲಿನ‌ ಶ್ರೀ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜೆಗಳು ಜರುಗಿದವು.
ಪುರಸಭೆ ಮಾಜಿ ಸದಸ್ಯೆ ಕಾವೇರಮ್ಮ‌ ಶೇಷಾದ್ರಿ‌ ನೇತೃತ್ವದಲ್ಲಿ ಶ್ರೀರಾಮನಿಗೆ ಪುಣ್ಯಾಹ, ಪಂಚಾಮೃತ ಅಭಿಷೇಕ, ಹೂವಿನ ಅಭಿಷೇಕ ಹಾಗೂ ದೀಪಾರತಿ‌ ಬೆಳಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಪೂಜಾ ವೇಳೆ ಶ್ರೀಹರಿ ಭಜನಾ ಮಂಡಳಿ ಮತ್ತು ಶ್ರೀಂಗನಾಯಕಿ ಸ್ತ್ರೀ‌ ಸಮಾಜದ ವತಿಯಿಂದ 50ಕ್ಕೂ ಹೆಚ್ಚು ಮಹಿಳೆಯರು‌‌ ಶ್ರೀರಾಮ ಹಾಗೂ ಹನುಮ‌ ಜಪ ಮಾಡುವುದರ ಜೊತೆಗೆ ಶ್ರೀರಾಮನ‌ ಕುರಿತು ಭಜನೆ ಮಾಡಿದರು. ಭಜನೆಯಲ್ಲಿ ಭಾಗವಹಿಸಿದ್ದವರಿಗೆ ಹಾಗೂ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಅನ್ನತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷವಾಗಿ‌ ಅಲಂಕೃತಗೊಂಡಿದ್ದ ಶ್ರೀ ಕೋದಂಡರಾಮನನ್ನು ನೂರಾರು ಭಕ್ತರು ಕಣ್ತಂಬಿಕೊಂಡು ಪ್ರಾರ್ಥನೆ ಸಲ್ಲಿಸಿದರು.

Previous articleನಾನು ನಾಸ್ತಿಕನಲ್ಲ-ಆಸ್ತಿಕ, ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ
Next articleನಮ್ಮ ಮನೆಗೆ ಶ್ರೀರಾಮ ಬಂದಿದ್ದಾನೆ