ಪತ್ನಿಯಿಂದಲೇ ಪತಿ ಬರ್ಬರ ಹತ್ಯೆ

0
30

ಕಲಬುರಗಿ: ಕೈ ಕಾಲು ಕಟ್ಟಿ ಹಾಕಿ ಹೆಂಡತಿ ಮತ್ತು ಆಕೆಯ ಮನೆಯವರು ಸೇರಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ನ್ಯಾ ರಾಘವೇಂದ್ರ ‌ಕಾಲೋನಿಯಲ್ಲಿರುವ ಅವನ ಪತ್ನಿ ಮನೆಗೆ ಹೋಗಿದ್ದ ಈಶ್ವರ್‌ (26) ಕೊಲೆಯಾದ ಪತಿ ಎಂದು ಗುರುತಿಸಲಾಗಿದೆ. ನಗರದ ಕನಕನಗರದ ನಿವಾಸಿಯಾಗಿರುವ ಈಶ್ವರ ನಗರದಲ್ಲೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕೈದು ವರ್ಷದ ಹಿಂದೆ ರಂಜಿತಾ ಜೊತೆ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಗಂಡ ಹೆಂಡತಿಯ ಮದ್ಯೆ ಜಗಳವಾದ ಕಳೆದ ನಾಲ್ಕೈದು ತಿಂಗಳಿಂದ ತಾಯಿ ಮನೆಯಲ್ಲಿ ವಾಸವಾಗಿದ್ದಳು. ನಿನ್ನೆ ರಾತ್ರಿ ಮಗುವನ್ನು ನೋಡಲು ಬಂದಿದ್ದ ಈಶ್ವರ ನ ಜತೆ ಗಲಾಟೆ ತೆಗೆದುಕೊಂಡು‌ ಕೈ ಕಾಲು ಕಟ್ಟಿ ಮನೆಯಲ್ಲಿ ಥಳಿಸಿದ್ದರು. ಮನೆಯವರ ಹೊಡೆತಕ್ಕೆ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿಷ ಸೇವಿಸಿ‌ ಪ್ರೇಮಿಗಳ‌ ಆತ್ಮಹತ್ಯೆ
Next articleಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ