ಪತ್ನಿಯನ್ನು ಮನಸೋ ಇಚ್ಛೆ ಕೊಲೆಮಾಡಿದ ಪತಿ

0
31

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಮನಸೋ ಇಚ್ಛೆ ೧೦ ಬಾರಿ ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಗ್ರಾಮದಲ್ಲಿ ನಡೆದಿದೆ.
ಕೀರ್ತಿ (೨೬) ಮೃತ ದುರ್ದೈವಿ, ಪತಿ ಅವಿನಾಶ್ (೩೨) ಪತ್ನಿಯನ್ನ ಕೊಂದ ಪತಿ. ಒಂದೇ ಊರಿನ ಒಂದೇ ಬೀದಿಯ ಕೀರ್ತಿ ಹಾಗೂ ಅವಿನಾಶ್ ೪ ವರ್ಷದ ಹಿಂದೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಎರಡುವರೆ ವರ್ಷದ ಹೆಣ್ಣು ಮಗು ಕೂಡ ಇದೆ. ಗಂಡ-ಹೆಂಡತಿ ನಡುವೆ ಕೆಲ ದಿನಗಳಿಂದ ವೈಮನಸ್ಸು ಉಂಟಾಗಿ ಜಗಳವಾಗುತ್ತಿತ್ತು. ಬುಧವಾರ ಮಧ್ಯಾಹ್ನ ಜಗಳ ಜೋರಾಗಿದ್ದು ಗಂಡ ಅವಿನಾಶ್ ತನ್ನ ಪತ್ನಿ ಕೀರ್ತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನ ಕೊಲೆ ಮಾಡಿ ಅವಿನಾಶ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದಂತೆ ಕೀರ್ತಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಕೀರ್ತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Previous articleಹಿರಿಯ ವಕೀಲ ಕೆ ಎನ್ ಪುಟ್ಟೇಗೌಡ ನಿಧನ: ಮೃತರ ಪಾರ್ಥಿವ ಶರೀರ ಆಸ್ಪತ್ರೆಗೆ ದಾನ
Next articleಹುಬ್ಬಳ್ಳಿ-ಕುಲೆಮ್ ವಿಭಾಗದಲ್ಲಿ `ವಿಂಡೋ ಟ್ರಯಲ್ ತಪಾಸಣೆ’