ಪತಿಯ ಹತ್ಯೆಗೆ ಪತ್ನಿಯಿಂದ ೫೦ ಸಾವಿರ ಬಹುಮಾನ

0
11

ಆಗ್ರಾ: ಮದುವೆಯಾದ ಐದೇ ತಿಂಗಳಲ್ಲೇ ಪತಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ತವರು ಮನೆ ಸೇರಿರುವ ಮಹಿಳೆಯೊಬ್ಬಳು ಪತಿಯ ಹತ್ಯೆಗಾಗಿ ೫೦ ಸಾವಿರ ರೂ ಬಹುಮಾನ ನೀಡುವುದಾಗಿ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಘೋಷಿಸಿಕೊಂಡಿದ್ದಾಳೆ. ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಬಹ್ ಎಂಬಲ್ಲಿ ಈ ಘಟನೆ ನಡೆದಿದ್ದು ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿಗೆ ನೆರೆಯಮನೆಯವಳ ಜೊತೆ ಅಕ್ರಮ ಸಂಬಂಧವಿದೆ ಎಂಬ ಆರೋಪದಲ್ಲಿ ತವರು ಮನೆ ಸೇರಿರುವ ಮಹಿಳೆ ಈಗ ಜೀವನಾಂಶಕ್ಕಾಗಿ ಭಿಂಡ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೇ ವೇಳೆ ಈ ಮಹಿಳೆಯ ಪ್ರಿಯಕರನಿಂದ ದೂರವಾಣಿ ಮೂಲಕ ತನಗೆ ಜೀವಬೆದರಿಕೆ ಬಂದಿದೆ ಎಂದು ಪತಿಯೂ ದೂರಿದ್ದಾನೆ.

Previous articleಯೋಗೇಶ್ವರ್ ಪುತ್ರಿಗೆ ಕಾಂಗ್ರೆಸ್‌ನತ್ತ ಒಲವು
Next articleಮೂರ್ಖರ ದಿನ ಆಚರಣೆ ಹೇಗೆ ಬಂತು..?