ಪಕ್ಷಿಕೆರೆ ಒಂದೇ ಕುಟುಂಬದ ಮೂವರು ಸಾವು ಪ್ರಕರಣ: ತಾಯಿ, ಮಗಳಿಗೆ ಜಾಮೀನು

0
27

ಮೂಡುಬಿದಿರೆ: ಮುಲ್ಕಿ ಪಕ್ಷಿಕೆರೆಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೃತ ಕಾರ್ತಿಕನ ತಾಯಿ ಶ್ಯಾಮಲ ಭಟ್(61) ಮತ್ತು ಅಕ್ಕ ಕಣ್ಮಣಿ ರಾವ್(36) ಅವರಿಗೆ ದ.ಕ ಜಿಲ್ಲಾ ಸೆಶನ್ಸ್ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ತನ್ನ ಪತ್ನಿ ಪ್ರಿಯಾಂಕಾ(28) ಮತ್ತು ನಾಲ್ಕು ವರ್ಷದ ಮಗು ಹೃದಯ್ ಎಂಬವರನ್ನು ಕೊಲೆ ಮಾಡಿ ಬಳಿಕ ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ನವೆಂಬರ್ 9ರಂದು ಪ್ರಕರರಣ ಬೆಳಕಿಗೆ ಬಂದಿತ್ತು. ಡೆತ್‌ನೋಟ್‍ನಲ್ಲಿ ಘಟನೆಗೆ ತನ್ನ ತಾಯಿ ಮತ್ತು ಸಹೋದರಿಯ ಕಿರುಕುಳ ಕಾರಣವೆಂದು ಪ್ರಸ್ತಾಪಿಸಿದ್ದ. ಈ ಬಗ್ಗೆ ಮುಲ್ಕಿ ಪೊಲೀಸರು ಕಾರ್ತಿಕ್ ಭಟ್‍ನ ಪತ್ನಿ ಪ್ರಿಯಾಂಕಾಳ ತಾಯಿ ನೀಡಿದ ದೂರಿನ ಆಧಾರದಲ್ಲಿ ಕಾರ್ತಿಕ್‍ನ ತಾಯಿ ಶ್ಯಾಮಲ ಭಟ್ ಮತ್ತು ಮಗಳು ಕಣ್ಮಣಿಯನ್ನು ಬಂಧಿಸಿ ಮೂಡುಬಿದಿರೆ ಕೋರ್ಟ್‍ಗೆ ಹಾಜರುಪಡಿಸಿದ್ದು ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ಪರ ಮೂಡುಬಿದಿರೆ ವಕೀಲರಾದ ಶರತ್ ಶೆಟ್ಟಿ ಜಿಲ್ಲಾ ಸೆಶನ್ಸ್ ಕೋರ್ಟ್‍ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.

Previous article27 ಕೋಟಿಗೆ ಲಕ್ನೋ ಪಾಲಾದ ಪಂತ್
Next articleಜಾರ್ಖಂಡ್: ೨೮ಕ್ಕೆ ಸೊರೆನ್ ಪದಗ್ರಹಣ