ನ್ಯಾಷನಲ್ ಶೂಟಿಂಗ್‌ನಲ್ಲಿ ಮಿಂಚಿದ ಮಂಡ್ಯದ ಮಗಳು

0
74

ಬಿ.ಆರ್.ದರ್ಶನ್‌ಕುಮಾರ್-ಎಂ.ಎಸ್.ಪುಣ್ಯ ಅತ್ಯುತ್ತಮ ಶೂಟರ್

ಬೆಂಗಳೂರು : ಭೋಪಾಲ್‌ನಲ್ಲಿ ನಡೆದ ೬೭ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ (ಎನ್‌ಎಸ್‌ಸಿಸಿ) ಮೈಸೂರು ಶೂಟಿಂಗ್ ಕ್ಲಬ್ ತರಬೇತಿದಾರ ಬಿ.ಆರ್. ದರ್ಶನ್ ಕುಮಾರ್ ಹಾಗೂ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿನಿ ಮಂಡ್ಯದ ಎಂ.ಎಸ್.ಪುಣ್ಯ ಅತ್ಯುತ್ತಮ ಶೂಟಿಂಗ್ ನಡೆಸಿ ರಿನೌಂಡ್ ಶೂಟರ್‌ಗಳಾಗಿ ಹೊರಹೊಮ್ಮಿದ್ದಾರೆ.
ದರ್ಶನ್‌ಕುಮಾರ್ ಅವರ ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದ ಎಂ.ಎಸ್.ಪುಣ್ಯ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಭಾರತೀಯ ತಂಡದ ಟ್ರಯಲ್ಸ್ಗೆ ಅರ್ಹತೆ ಪಡೆದು ಹೆಸರಾಂತ ಶೂಟರ್ ಖ್ಯಾತಿಗೆ ಭಾಜನರಾಗಿದ್ದಾರೆ.
ಮೈಸೂರಿನ ಶೂಟಿಂಗ್ ಇತಿಹಾಸದಲ್ಲಿ ರಾಷ್ಟçಮಟ್ಟದ ಮೊದಲ ನಾಗರಿಕ ಮಹಿಳಾ ಶೂಟರ್ ಖ್ಯಾತಿ ಪಡೆದಿರುವ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿ ಎಂ.ಎಸ್.ಪುಣ್ಯ ಎಲ್ಲಾ ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಶೂಟರ್ ಎನಿಸಿಕೊಂಡಿದ್ದಾರೆ.
.೨೨ ಈವೆಂಟ್‌ಗಳಲ್ಲಿ ಭಾರತೀಯ ತಂಡದ ಟ್ರಯಲ್ಸ್ಗೆ ಅರ್ಹತೆ ಪಡೆದಿರುವ ಎಂ.ಎಸ್.ಪುಣ್ಯ ಪ್ರೋನ್ ಈವೆಂಟ್‌ನಲ್ಲಿ ೬೦೩.೪ ಅಂಕ ಹಾಗೂ ೩ಪಿ ಈವೆಂಟ್ ಜೂನಿಯರ್ ಮಹಿಳಾ ವಿಭಾಗದಲ್ಲಿ ೫೫೮ ಅಂಕ ಗಳಿಸಿ ಮೈಸೂರಿಗೆ ಕೀರ್ತಿ ತಂದಿದ್ದಾರೆ.

೯ನೇ ತರಗತಿಯಲ್ಲಿ ಓದುತ್ತಿರುವ ಹಾಸನದ ತನಯ್ ಚಂದ್ರ ೧೦ ಮೀಟರ್ ಏರ್ ರೈಫಲ್ ಸಬ್ ಯೂತ್ ಮೆನ್ ವಿಭಾಗದಲ್ಲಿ ೫೮೮.೭ ಅಂಕ ಗಳಿಸುವ ಮೂಲಕ ಹೆಸರಾಂತ ಶೂಟರ್ ಆಗಿದ್ದಾರೆ.
ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿರುವ ಮೈಸೂರಿನ ಪಿ.ವರ್ಷಿಣಿ ೧೦ ಮೀಟರ್ ಏರ್ ರೈಫಲ್ ಯುವ ಮತ್ತು ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾಗವಹಿಸಿದ್ದರು.
ಮೈಸೂರಿನ ಪ್ಯಾರಾಶೂಟರ್ ಬಿ.ಆರ್.ದರ್ಶನ್‌ಕುಮಾರ್ ಅವರು ಪ್ಯಾರ ಒಲಂಪಿಕ್ ಕಮಿಟಿ ಪುಣೆಯಲ್ಲಿ ಆಯೋಜಿಸಿದ್ದ ಪ್ಯಾರಾ ನ್ಯಾಷನಲ್ ಶೂಟರ್ ಸ್ಪರ್ಧೆಯಲ್ಲಿ ಭಾಗವಹಿಸಿ ಉನ್ನತ ಅಂಕಗಳನ್ನು ಪಡೆದು ಇಂಡಿಯಾ ಟ್ರಯಲ್ಸ್ಗೆ ಆಯ್ಕೆಯಾಗಿದ್ದಾರೆ.
ಸಂತಸ : ರಾಷ್ಟçಮಟ್ಟದಲ್ಲಿ ಮೈಸೂರಿನ ಕೀರ್ತಿಯನ್ನು ಎತ್ತಿಹಿಡಿದಿರುವ ಶೂಟರ್‌ಗಳ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕ್ಲಬ್ ತರಬೇತುದಾರರಾದ ಬಿ.ಆರ್.ದರ್ಶನ್‌ಕುಮಾರ್ ಸಾಹಸ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಹುಬ್ಬಳ್ಳಿ ಕ್ರೀಡಾ ಶೂಟಿಂಗ್ ಅಕಾಡೆಮಿಯ ಕೋಚ್ ರವಿಚಂದ್ರನ್ ಬಾಳೆಹೊಸೂರು ಹಾಗೂ ಜೆಎಸ್‌ಎಸ್ ಕಾಲೇಜು ಆಡಳಿತಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Previous articleIND vs AUS:  ಟೀಮ್ ಇಂಡಿಯಾ  ಮುನ್ನಡೆ
Next articleಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ, ಸಿಪಿಎಂ ನಾಯಕ ಬಯ್ಯಾರೆಡ್ಡಿ ನಿಧನ