ನೌಕಾಪಡೆ ವಿಮಾನ ತುರ್ತು ಭೂಸ್ಪರ್ಶ

0
11

ಪಣಜಿ: ಭಾರತೀಯ ನೌಕಾಪಡೆಯ ವಿಮಾನವೊಂದು ಭಾನುವಾರ ಸಂಜೆ ಗೋವಾದ ವಾಸ್ಕೊ ದಾಬೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ. ರನ್‌ವೇ ಇಲ್ಲದ ಕಾರಣ ನಾಲ್ಕು ವಿಮಾನಗಳನ್ನು ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಬೇಕಾಯಿತು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ದಾಬೋಲಿಯಲ್ಲಿರುವ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ನೌಕಾಪಡೆಯ ವಿಮಾನವು ತುರ್ತು ಭೂಸ್ಪರ್ಶ ಮಾಡಿದ ಕಾರಣ ವಿಮಾನ ಸೇವೆಗಳಿಗೆ ತೊಂದರೆಯಾಯಿತು. ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ವಿ.ಟಿ. ರಾವ್ ಈ ಮಾಹಿತಿ ನೀಡಿದರು. ಭಾರತೀಯ ನೌಕಾಪಡೆಯ ವಿಮಾನವು ತುರ್ತು ಭೂಸ್ಪರ್ಶ ಮಾಡಿದ ನಂತರ ಶುಕ್ರವಾರ ಸಂಜೆ ೪.೫೦ ರಿಂದ ೬.೩೦ ರವರೆಗೆ ಪ್ರಯಾಣಿಕರ ವಿಮಾನಗಳಿಗಾಗಿ ರನ್‌ವೇಯನ್ನು ಮುಚ್ಚಲಾಯಿತು. ಈ ಅವಧಿಯಲ್ಲಿ, ನಾಗರಿಕ ವಿಮಾನಗಳಿಗೆ ರನ್‌ವೇ ಲಭ್ಯವಿಲ್ಲದ ಕಾರಣ ನಾಲ್ಕು ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕಾಯಿತು. ಮೂರು ವಿಮಾನಗಳನ್ನು ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು, ಇನ್ನೊಂದು ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಸಂಜೆ ೬.೩೦ರ ನಂತರ ಎಂದಿನಂತೆ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಆರಂಭವಾಗಿದೆ ಎಂದು ರಾವ್ ತಿಳಿಸಿದರು.

Previous articleಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ
Next articleಲೈಂಗಿಕ ದೌರ್ಜನ್ಯ ಪ್ರಕರಣ: ಎಚ್‌.ಡಿ ರೇವಣ್ಣ ಜಾಮೀನು ಮಂಜೂರು