ನೀಟ್ ಫಲಿತಾಂಶದಲ್ಲಿ ವಿಜಯಪುರದ ವೈದ್ಯ ದಂಪತಿ ಪುತ್ರನ ಸಾಧನೆ

0
68

ವಿಜಯಪುರ: ವಿಜಯಪುರ ಸೈನಿಕ್‌ ಶಾಲೆಯ ವಿದ್ಯಾರ್ಥಿಯಾಗಿದ್ದ ನಿಖಿಲ್‌ ನೀಟ್​ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 17ನೇ ರ‍್ಯಾಂಕ್‌ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂದು ಪ್ರಕಟಗೊಂಡ ನೀಟ್​ ಪರೀಕ್ಷೆಯ ಫಲಿತಾಂಶದಲ್ಲಿ ಸಾಧನೆ ಮಾಡಿರುವ ನಿಖಿಲ್​ ಸೊನ್ನದ ಅವರು ವಿಜಯಪುರ ನಗರದ ‘ಸಂಜೀವಿನಿ’ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸಿದ್ದಪ್ಪ ಸೊನ್ನದ ಮತ್ತು ಡಾ.ಮೀನಾಕ್ಷಿ ಸೊನ್ನದ ಅವರ ಪುತ್ರರಾಗಿದ್ದಾರೆ. ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಖಿಲ್‌ ಸೊನ್ನದ ಅವರು 720 ಅಂಕಗಳಿಗೆ 670 ಅಂಕ ಗಳಿಸಿದ್ದಾರೆ. ವಿಜಯಪುರ ಸೈನಿಕ್‌ ಶಾಲೆಯ ವಿದ್ಯಾರ್ಥಿಯಾಗಿದ್ದು, ಮಂಗಳೂರಿನ ಎಕ್ಸ್‌ಫರ್ಟ್‌ನಲ್ಲಿ ಪಿಯುಸಿ ಓದಿದ್ದಾರೆ.

Previous articleಡಾ. ಪ್ರವೀಣಭಾಯಿ ತೊಗಾಡಿಯಾ 16ರಂದು ಹುಬ್ಬಳ್ಳಿಗೆ
Next articleಸಿಎಂ ಬದಲಾವಣೆ ನನಗೆ ಗೊತ್ತಿಲ್ಲ