ನಿಪ್ಪಾಣಿ ಬಳಿ ಸರಣಿ ಅಪಘಾತ ಇಬ್ಬರ ಸಾವು

0
29

ಚಿಕ್ಕೋಡಿ : ನಿಪ್ಪಾಣಿ ಸ್ಥವನಿಧಿ ಘಾಟ್ ಬಳಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು ಆರು ಜನ ಗಾಯಗೊಂಡ ದಾರುಣ ಘಟನೆ
ಸಂಭವಿಸಿದೆ.
ಕಂಟೈನರ್ ಲಾರಿ ಬ್ರೇಕ್ ವೈಫಲ್ಯವಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬೈಕ್ ಸವಾರಿ ಮಾಡುತ್ತಿದ್ದ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಗಣಪತಿ ಮಾನೆ(೪೫) ಹಾಗೂ ವ್ಯಾಗನಾರ ಕಾರಿನಲ್ಲಿ ತೆರಳುತ್ತಿದ್ದ ನಿಪ್ಪಾಣಿ ಪಟ್ಟಣದ ಜಲೀನ್ ಮಕಾಂದಾರ(೫೮) ಎಂದು ಗುರುತಿಸಲಾಗಿದೆ.
ಗಾಯಾಳುಗಳಿಗೆ ನಿಪ್ಪಾಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೇನರ ವಾಹನದ ಚಾಲಕನ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮೂರು ಕಾರು, ಎರಡು ಲಾರಿ, ಒಂದು ಕಂಟೇನರ್ ಹಾಗೂ ಬೈಕ್‌ಗಳಿಗೆ ಕಂಟೇನರ್ ಗುದ್ದಿದ. ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರು ಭೇಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಮುನಿರತ್ನ ಬಂಧಿಸಿರುವುದು ದ್ವೇಷದ ರಾಜಕಾರಣ
Next articleರಾಹುಲ್ ನಂ.೧ ಭಯೋತ್ಪಾದಕ