ನಾಳೆ PM ರಿಸೈನ್ ಕೊಡುತ್ತಾರೆ…?

0
41

ಯಾದಗಿರಿ: ದಸರಾ ಬಳಿಕ ಸಿಎಂ ರಾಜೀನಾಮೆ ಎಂಬ ಬಿಜೆಪಿ ನಾಯಕರ ಹೇಳಿಕೆ ನಂತರವೇ ಈಗ ಎರಡನೇ ದಸರಾ ಮುಗಿದಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಏನಾದರೂ ಮಾಡುತ್ತಾರೆ, ಶಾಸಕ ಯತ್ನಾಳ ಬಿಜೆಪಿಯಲ್ಲಿ ಸಿಎಂ ಆಗಲು 2 ಸಾವಿರ ಕೋಟಿ ರೂ. ತೆಗೆದಿಟ್ಟಿದ್ದಾರೆ ಎಂದು ಹೇಳಿದ್ದಾರೆ, ಯತ್ನಾಳ ಹೇಳಿದ ನಂತರ ಮೋದಿ ಏನು ಕಣ್ಣು ಮುಚ್ಚಿಕೊಂಡು ಕುಳಿತಿದ್ದರಾ..? ಮೋದಿ, ಅಮಿತ್ ಶಾ ಏನ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ, ಬಿಜೆಪಿಯವರು ಯಾರು ಸಹ ಅಭಿವೃದ್ಧಿ ಪರ ಇಲ್ಲ ಎಂದರು.

ನಾಳೆ PM ರಿಸೈನ್ : ಸಿಎಂ ಬದಲಾವಣೆ ವಿಚಾರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ಸಿಎಂ ಕುರ್ಚಿ ಖಾಲಿ ಇಲ್ಲ ಖಾಲಿಯಾದ ನಂತರ ಈ ಬಗ್ಗೆ ಚರ್ಚೆ ಆಗುತ್ತದೆ ಆದರೆ ಪಿಎಂ ಬದಲಾವಣೆ ಬಗ್ಗೆ ಈಗ ಚರ್ಚೆ ನಡೆದಿದೆ, ನಾಳೆ ಪಿಎಂ ರಿಸೈನ್ ಕೊಡುತ್ತಾರೆ ಎಂಬ ಸುದ್ದಿ ಇದೆ ಎಂದರು.

ಮುಂದಿನ ಮುಖ್ಯಮಂತ್ರಿ: ಸತೀಶ ಜಾರಕಿಹೋಳಿ ಮುಂದಿನ ಸಿಎಂ ಎಂದು ಬ್ಯಾನರ್ ವಿಚಾರವಾಗಿ ಮಾತನಾಡಿ, ಅಭಿಮಾನಿಗಳು ಬ್ಯಾನರ್ ಹಾಕುತ್ತಾರೆ ಅದರಲ್ಲಿ ತಪ್ಪೇನಿದೆ, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ, ಯಾಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಬಿಜೆಪಿ ನಾಯಕರು ಹೇಳಬೇಕು ಎಂದರು.‌

Previous articleಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ನಿರ್ಮಾಣ ಮಾಡಿದ ಮಲ್ಲವಕ್ಕನಿಗೆ ಕಾನೂರು ಹೆಗ್ಗಡಿತಿ ನೀಡಿದ ಹೆಬ್ಬಾಳ್ಕರ್‌
Next articleಹುಬ್ಬಳ್ಳಿ ಗಲಭೆ ಪ್ರಕರಣ: ಕೇಸ್ ವಾಪಸ್ ಪಡೆದಿದ್ದು ಸರಿಯಾಗಿದೆ