ನಾಲ್ಕು ಮರಕ್ಕೆ ಬುಲೆಟ್ ಹೊಡೆದು ಸರ್ಜಿಕಲ್ ಸ್ಟ್ರೈಕ್ ಎಂದು ಬಿಜೆಪಿ ಬಿಂಬಿಸಿತು

0
38

ಮೈಸೂರು: ನಾಲ್ಕು ಮರಕ್ಕೆ ಬುಲೆಟ್ ಹೊಡೆದು ಅದನ್ನೆ ಸರ್ಜಿಕಲ್ ಸ್ಟ್ರೈಕ್ ಅಂತಾ ಬಿಜೆಪಿ ಬಿಂಬಿಸಿತು ಎಂದು‌ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ‌ ಮಾತನಾಡಿ, ದೇಶದ ಜನರ ರಕ್ತದ ಮೇಲೆ ಅಧಿಕಾರ ಹಿಡಿಯುವುದು ಬಿಜೆಪಿ ಚಟ. ಕಾಶ್ಮೀರದ ಮುಸ್ಲಿಮರೇ ಬಹಳಷ್ಟು ಜನರನ್ನು ಕಾಪಾಡಿದ್ದಾರೆ. ಧರ್ಮದ ಹೆಸರು ಕೇಳಿ ಯಾರನ್ನು ಅಲ್ಲಿ ಕೊಂದಿಲ್ಲ. ಸುಮ್ಮನೆ ಮುಸ್ಲಿಂರು ಮುಸ್ಲಿಂರು ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ‌ಆರೋಪಿಸಿದರು.
ಈ ಘಟನೆ ನಡೆದ ದಿನ ಯಾಕೆ ಅಲ್ಲಿ ಸೇನೆ ಮತ್ತು ಪೊಲೀಸ್ ಇರಲಿಲ್ಲ. ಇದರ ಹಿಂದೆ ಬೇರೆ ಏನೋ ಉದ್ದೇಶವಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು ಎಂದು‌ ಒತ್ತಾಯಿಸಿದರು.
ಹಿಂದೂ-ಮುಸ್ಲಿಂ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆಲ್ಲುವುದೆ ಬಿಜೆಪಿ ಉದ್ದೇಶ. ಮುಸ್ಲಿಂರೆಲ್ಲಾ ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಶುರುವಾಗಿದೆ ಎಂದು‌ ವಾಗ್ದಾಳಿ ನಡೆಸಿದರು.

Previous articleಗುಂಡು ಹಾರಿಸಿಕೊಂಡು ಪಾಲಿಕೆ ಮಾಜಿ ಸದಸ್ಯರ ಪುತ್ರ ಆತ್ಮಹತ್ಯೆ
Next articleಸರ್ಜಿಕಲ್ ಸ್ಟ್ರೈಕ್ ಬಗ್ಗೆ ವ್ಯಂಗ್ಯ: ನಿಮ್ಮ ಭಂಡ ಬಾಳಿಗೆ ಏನು ಹೇಳೋಣ…