ಮೇಲುಕೋಟೆ: ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ದಳವಾಯಿ ಕೆರೆಯ ಸಮೀಪದಲ್ಲಿ ನವಜಾತ ಹೆಣ್ಣು ಶಿಶುವಿನ ಶವ ದೊರೆತಿದೆ.
ಮೃತ ಮಗು ಬಹುಶಃ ಎರಡು ದಿನ ಹಿಂದಷ್ಟೇ ಜನಿಸಿದ್ದು, ಶವವನ್ನು ಕವರ್‌ನಲ್ಲಿ ಸುತ್ತಿ ಕೆರೆಯ ಸಮೀಪದ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ. ಹೆಣ್ಣೆಂಬ ಕಾರಣಕ್ಕೋ ಅಥವಾ ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು ಸಾಯಿಸಿ ಬಿಸಾಡಿರಬಹುದು. ಇಲ್ಲವೇ ಸತ್ತ ಮಗು ಕಳೆಬರವನ್ನು ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಗುವಿನ ಕಳೆಬರವನ್ನು ವಶಕ್ಕೆ ತೆಗೆದುಕೊಂಡು ಶವ ಪರೀಕ್ಷೆಗಾಗಿ ತಾಲೂಕು ಶವಾಗಾರಕ್ಕೆ ಕಳುಹಿಸಿದ್ದಾರೆ.