ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ

0
7
Akanksha Dubey

ಭೋಜ್‌ಪುರಿ ನಟಿ ಅಕಾಂಕ್ಷಾ ದುಬೆ ಅವರು ವಾರಣಾಸಿಯ ಖಾಸಗಿ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕಾಂಕ್ಷಾ ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಶೂಟಿಂಗ್‌ ಸಲುವಾಗಿ ಅಕಾಂಕ್ಷಾ ವಾರಣಾಸಿಗೆ ಆಗಮಿಸಿದ್ದರು. ಶೂಟಿಂಗ್ ಮುಗಿಸಿ, ಅವರು ಹೋಟೆಲ್‌ಗೆ ಹೋಗಿದ್ದರು. ಇಂದು ಬೆಳಗ್ಗೆ ಅವರಿದ್ದ ಕೊಠಡಿಯ ಬಾಗಿಲು ತೆರೆದಾಗ, ಅಕಾಂಕ್ಷಾ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆ ಎಂದು ಗೊತ್ತಾಗಿದೆ.
ಮೇರಿ ಜಂಗ್ ಮೇರಾ ಫೈಸ್ಲಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದಅವರನ್ನು ಭೋಜ್‌ಪುರಿ ಚಲನಚಿತ್ರೋದ್ಯಮದ ಡ್ರೀಮ್ ಗರ್ಲ್ ಎಂದು ಕರೆಯುತ್ತಿತ್ತು, ಮುಜ್ಸೆ ಶಾದಿ ಕರೋಗಿ (ಭೋಜ್‌ಪುರಿ), ವೀರೋನ್ ಕೆ ವೀರ್, ಫೈಟರ್ ಕಿಂಗ್, ಮತ್ತು ಕಸಮ್ ಪೈಡಾ ಕರ್ನೆ ಕೆಐ 2 ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದರು

Previous articleಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ: ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ
Next article‘ಅನರ್ಹ ಸಂಸದ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ರಾಹುಲ್