ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಏನೂ ಹೇಳಲ್ಲ

0
16

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಯಾರಾದರೂ ಸ್ಪರ್ಧೆ ಮಾಡಬಹುದು. ನನ್ನ ಬಗ್ಗೆ ಅವರೇನೇ ಹೇಳಿದರೂ ಆಶೀರ್ವಾದವೆಂದೇ ಭಾವಿಸುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ರಾಷ್ಟ್ರೀಯತೆ, ರಾಷ್ಟ್ರೀಯ ಸವಾಲು ಹಾಗೂ ಅಭಿವೃದ್ಧಿಗಳ ಆಧಾರದ ಮೇಲೆ ನಡೆಯುವಂತಹದ್ದೇ ಹೊರತು ಜಾತಿ ಆಧಾರಿತವಲ್ಲ ಎಂದರು. ದೇಶಕ್ಕೆ ನರೇಂದ್ರ ಮೋದಿ ನೇತೃತ್ವ ಬೇಕೋ ಅಥವಾ ರಾಹುಲ್ ಗಾಂಧಿ-ಇಂಡಿ ಮೈತ್ರಿಕೂಟದ ಮತ್ತು ಇತರರ ನೇತೃತ್ವ ಬೇಕೋ? ಎಂಬ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

Previous articleಸೋತ ಜಾಗದಲ್ಲೇ ಗೆಲ್ಲುವೆ
Next articleಎಲ್ಲರನ್ನು ಬಡವರನ್ನಾಗಿ ಮಾಡುವುದು ರಾಹುಲ್ ಸಮಾನತೆ