ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಇಂದು ನಿರ್ಧಾರ

0
16

ಹುಬ್ಬಳ್ಳಿ: ಕುತೂಹಲಕ್ಕೆಡೆ ಮಾಡಿರುವ ಧಾರವಾಡ ಲೋಕಸಭಾ ಕ್ಷೇತ್ರದಿಂದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆಯೇ…?
ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಸೋಲಿಸಬೇಕೆಂದು ಪಣ ತೊಟ್ಟಂತಿರುವ ಶಿರಹಟ್ಟಿ ಫಕೀರಸ್ವಾಮಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ (ಏ.೮) ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಬೆಂಗಳೂರಿನ ಹಳೆ ಬಳ್ಳಾರಿ ರಸ್ತೆಯ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಬೆಳಗ್ಗೆ ೯.೩೦ಕ್ಕೆ `ಚಿಂತನ ಮಂಥನ’ ಸಭೆ ಕರೆದಿದ್ದು, ಈ ಸಭೆಯ ಬಳಿಕ ತಾವು ಸ್ಪರ್ಧಿಸಬೇಕೋ ಬೇಡವೋ ಎಂಬ ನಿರ್ಧಾರ ಪ್ರಕಟಿಸಲಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಘೋಷಣೆ ಮಾಡುವರೆ? ಅಥವಾ ಕೈ ಅಭ್ಯರ್ಥಿಗೇ ತಮ್ಮ ಬೆಂಬಲವಿದೆ ಎಂದು ಘೋಷಣೆ ಮಾಡುವರೇ? ಇಲ್ಲವೇ ಭಕ್ತರ ಅಭಿಪ್ರಾಯದಂತೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ತಟಸ್ಥ ನಿಲುವು ತಾಳಿದ್ದೇವೆ ಎಂದು ಹೇಳುತ್ತಾರೆಯೇ ಎಂಬ ಕುತೂಹಲ ಇದೆ.

Previous articleಸಿಎಂ ಗಲ್ಲಿಗಲ್ಲಿ ಓಡಾಡುತ್ತಿದ್ದಾರೆ
Next articleಕುಕ್ಕೆ ದೇಗುಲ ಆದಾಯ ಮತ್ತೆ ರಾಜ್ಯಕ್ಕೆ ಪ್ರಥಮ