ದಾಖಲೆಯಿಲ್ಲದ 30 ಲಕ್ಷ ಹಣ, 2.50 ಲಕ್ಷ ರೂ ಮೌಲ್ಯದ ಬಟ್ಟೆ ಜಪ್ತಿ

0
11

ಕಲಬುರಗಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 30 ಲಕ್ಷ ಹಣ ಹಾಗೂ. 2.50 ಲಕ್ಷ ರೂ ಮೌಲ್ಯದ ಬಟ್ಟೆ ಜಪ್ತಿ ಮಾಡಲಾಗಿದೆ,
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೆದಕ್ ಚೆಕ್‌ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದ್ದು, ಕಾರಿನ ಡಿಕ್ಕಿಯಲ್ಲಿ ದೊಡ್ಡದಾದ ಬಾಕ್ಸ್‌ನಲ್ಲಿ ಹಣ ಸಾಗಾಟ ಮಾಡಲಾಗುತ್ತಿತ್ತು.
ಈ ವೇಳೆ ಮೆದಕ್ ಚೆಕ್‌ಪೋಸ್ಟ್ ಬಳಿ ಚುನಾವಣಾ ಸಿಬ್ಬಂದಿಗಳಿಂದ ಕಾರು ತಪಾಸಣೆ ಒಳಪಡಿಸಿದ್ದಾಗ ಬೃಹತ್ ಮೊತ್ತ ಪತ್ತೆಯಾಗಿದೆ. ಸೂಕ್ತ ದಾಖಲೆಯಿಲ್ಲದೇ ಇರೋವುದರಿಂದ 30 ಲಕ್ಷ‌ ರೂ ಹಣದ ಜೊತೆ 2.50 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಜಪ್ತಿ ಸಹ ವಶಕ್ಕೆ‌ ಪಡೆಯಲಾಗಿದೆ. ಈ ವೇಳೆ ಹಣ ಸಾಗಾಟ‌ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ನಾರಾಯಣಪೇಟೆಯಿಂದ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಕೊಡಂಗಲ್‌ಗೆ ಹಣ ಸಾಗಾಟ ಮಾಡುತ್ತಿದ್ದರು. ಕರ್ನಾಟಕ-ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಮೆದಕ್ ಚೆಕ್‌ಪೋಸ್ಟ್ ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ.

Previous articleಸಿಎಂ ಸ್ಥಾನದಿಂದ ವಜಾ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
Next articleಸಾವು ಗೆದ್ದ ಸಾತ್ವಿಕ್: ಮನವಿ ಮಾಡಿದ ಸಚಿವ ಎಂ.ಬಿ ಪಾಟೀಲ್