ತುರ್ತು ಕಾಮಗಾರಿ: ಕೆಲ ರೈಲುಗಳು ಭಾಗಶಃ ರದ್ದು

0
25

ಹುಬ್ಬಳ್ಳಿ: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ವಲಯ ರದ್ದುಪಡಿಸಿದೆ. ಕೆಲ ರೈಲುಗಳಿಗೆ ಮಾರ್ಗಮಧ್ಯದಲ್ಲಿ ೪೦, ೯೦ ನಿಮಿಷಗಳನ್ನು ಸಮಯ ನಿಯಂತ್ರಣ ಮಾಡಿ ಆದೇಶಿಸಿದೆ.
ಭಾಗಶಃ ರದ್ದಾದ ರೈಲುಗಳು
ಕೊಪ್ಪಳ-ಗಿಣಿಗೇರಾ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೬೩ರ ಬದಲಿಗೆ ಸಬ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೊಲ್ಲಾಪುರ-ಹೊಸಪೇಟೆ ಎಕ್ಸ್ಪ್ರೆಸ್ (ರೈಲು ಸಂಖ್ಯೆ ೧೧೩೦೫) ರೈಲು ಜನವರಿ ೨೨ ರಿಂದ ೩೧ ರವರೆಗೆ ಗದಗ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದೆ. ಈ ನಿಗದಿತ ಅವಧಿಯಲ್ಲಿ ಗದಗ ನಿಲ್ದಾಣದಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
ಹೊಸಪೇಟೆ-ಸೋಲಾಪುರ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ ೧೧೩೦೬) ಜನವರಿ ೨೩ ರಿಂದ ಫೆಬ್ರವರಿ ೧ರವರೆಗೆ ಹೊಸಪೇಟೆ-ಗದಗ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದೆ. ಈ ರೈಲು ತನ್ನ ನಿಗದಿತ ಸಮಯಕ್ಕೆ ಹೊಸಪೇಟೆ ನಿಲ್ದಾಣ ಬದಲು ಗದಗ ನಿಲ್ದಾಣದಿಂದ ಹೊರಡಲಿದೆ.
ರೈಲುಗಳ ನಿಯಂತ್ರಣ: ಜನವರಿ ೨೨, ೨೩, ೨೯ ಮತ್ತು ೩೧ ರಂದು ವಿಜಯವಾಡ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ ೧೭೩೩೦ ವಿಜಯವಾಡ-ಎಕ್ಸಪ್ರೆಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ ೪೦ ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಮೈಸೂರು ವಿಭಾಗದ ಮಂದಗೆರೆ ನಿಲ್ದಾಣದಲ್ಲಿ ಅಗತ್ಯ ಸಿಗ್ನಲಿಂಗ್ ಸಂಬಂಧಿತ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಅವುಗಳ ಮಾಹಿತಿ ಕೆಳಗಿನಂತಿವೆ:
ಯಶವಂತಪುರ-ಮೈಸೂರು ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೧೬೨೦೭ ) ಜನವರಿ ೨೦ರಂದು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಅರಸೀಕೆರೆ-ಮೈಸೂರು ವಿಶೇಷ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ ೦೬೨೬೭) ಜನವರಿ ೨೦ರಂದು ಅರಸೀಕೆರೆ ನಿಲ್ದಾಣದಿಂದ ೯೦ ನಿಮಿಷ ತಡವಾಗಿ ಹೊರಡಲಿದೆ.
ಮೈಸೂರು-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೬೨೬೯ ) ಜನವರಿ ೨೦ರಂದು ಮೈಸೂರು ನಿಲ್ದಾಣದಿಂದ ೯೦ ನಿಮಿಷ ತಡವಾಗಿ ಹೊರಡಲಿದೆ.
ಮೈಸೂರು-ಅರಸೀಕೆರೆ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೬೨೧೪) ಜನವರಿ ೨೦ರಂದು ೪೫ ನಿಮಿಷಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

Previous articleಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮ ಮದ್ಯ ಸಾಗಾಟ
Next articleಉತ್ಖನನ ವೇಳೆ ಸದಲಗಾದಲ್ಲಿ ಶ್ರೀರಾಮ ಮಂದಿರ ಪತ್ತೆ