ತಾನೇ ಹಾಕಿದ ಬಲೆಗೆ ಸಿಲುಕಿ ವ್ಯಕ್ತಿ ಸಾವು

0
17

ಬೆಳಗಾವಿ : ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ಮಾಡಲು ಹೋಗಿ ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಮಹಾಂತೇಶ ದುರ್ಗಪ್ಪ ಕರಕರಮುಂಡಿ (38) ಮೃತ ದುರ್ದೈವಿಯಾಗಿದ್ದು, ಬೆಳಗಿನ ಜಾವ ನದಿಯಲ್ಲಿ ಮೀನುಗಾರಿಕೆಗೆ ಬಲೆ ಹಾಕಿದ್ದ ಮಹಾಂತೇಶ ಬಳಿಕ ನೀರಿಗಿಳಿದಿದ್ದ. ಈ ವೇಳೆ ಕಾಲಿಗೆ ಬಲೆ ಸುತ್ತಿ ಹೊರ ಬರಲಾಗದೇ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ

Previous articleಮಾಸ್ ರೇಪಿಸ್ಟ್ ಪರ ಮತಯಾಚಿಸಿದ ಮೋದಿ ಕ್ಷಮೆ ಕೇಳಬೇಕು
Next articleಕಳ್ಳರನ್ನು ಕಟ್ಟಿಹಾಕಿ ಧರ್ಮದೇಟು