ತಮಿಳುನಾಡಿನಿಂದ ಅಯೋಧ್ಯೆಗೆ ಹೊರಟ ಭಾರೀ ಘಂಟೆಗಳು

0
25

ಚೆನ್ನೈ: ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಸಾಕ್ಷಿಯಾಗಲು ಹಲವಾರು ಕಡೆಗಳಿಂದ ಭಕ್ತಿಪೂರ್ವಕ ಕಾಣಿಕೆಗಳನ್ನು ಕಳುಹಿಸಲಾಗುತ್ತಿದೆ. ತಮಿಳುನಾಡಿನಿಂದ ಸಹ ಭಕ್ತಿಯ ಸಂಕೇತವಾಗಿ 1,200 ಕೆಜಿ ತೂಕದ ಒಟ್ಟು 42 ಘಂಟೆಗಳನ್ನು ರವಾನಿಸಲಾಗಿದೆ.
ನಾಮಕ್ಕಲ್ ಜಿಲ್ಲೆಯಲ್ಲಿ ಘಂಟೆಗಳನ್ನು ತಯಾರಿಸಲಾಗಿದೆ. ಬಳಿಕ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾಮಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ.‌
ಈ ಸಂಬಂಧ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಮಾಲೀಕ ಆರ್.ರಾಜೇಂದ್ರನ್ ಮಾತನಾಡಿ, ಆರು ಘಂಟೆಗಳು ತಲಾ 70 ಕೆ.ಜಿ ತೂಗುತ್ತವೆ. ಆದರೆ ಒಂದು ಘಂಟೆ ಮಾತ್ರ 25 ಕೆ.ಜಿ ತೂಗುತ್ತದೆ ಎಂದಿದ್ದಾರೆ.

Previous articleಪ್ರಧಾನಿ ಮೋದಿ ವರ್ಸಸ್ ಖರ್ಗೆ
Next articleರಾಜ್ಯದ 8 ಮಂದಿಗೆ ಕೊರೊನಾ