ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ…

0
40

ಬೆಂಗಳೂರು: ಕಾನೂನು ರೀತಿಯ ಹೋರಾಟ ಮಾಡಲು, ತನಿಖೆ ಎದುರಿಸಲು ನಾನು ಸಿದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರು ಲೋಕಾಯುಕ್ತಕ್ಕೆ ತನಿಖೆಗೆ ಆದೇಶ ನೀಡಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಆದೇಶದ ಪೂರ್ಣ ಪ್ರತಿ ಓದಿ ವಿಸ್ತೃತವಾಗಿ ಪ್ರತಿಕ್ರಿಯೆ ನೀಡುತ್ತೇನೆ. ಕಾನೂನು ರೀತಿಯ ಹೋರಾಟ ಮಾಡಲು, ತನಿಖೆ ಎದುರಿಸಲು ನಾನು ಸಿದ್ಧನಾಗಿದ್ದೇನೆ. ಈ ಮಾತನ್ನು ನಿನ್ನೆಯೂ ಹೇಳಿದ್ದೆ, ಅದನ್ನೆ ಈಗಲೂ ಪುನರುಚ್ಚರಿಸುತ್ತಿದ್ದೇನೆ. ತನಿಖೆಗೆ ಹೆದರುವ ಪ್ರಶ್ನೆ ಇಲ್ಲ, ಎಲ್ಲವನ್ನು ಎದುರಿಸಲು ನಿರ್ಧರಿಸಿದ್ದೇನೆ. ಕಾನೂನು ಪರಿಣಿತರ ಜೊತೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.

Previous articleಕಾರ್ಯಕರ್ತರ ಮೇಲೆ ಪದೇ ಪದೇ ದೌರ್ಜನ್ಯ
Next articleಅರ್ಜುನ್ ಮೃತದೇಹದ ಜೊತೆ ಭಾರತ್ ಬೆಂಜ್ ಲಾರಿಯೂ ಪತ್ತೆ