ಡಿಸಿಎಂ ಹುದ್ದೆಗೆ ಸಿದ್ದು ಮಾಸ್ಟರ್ ಪ್ಲ್ಯಾನ್

0
16
ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಇನ್ನೂ ಇಬ್ಬರು ಡಿಸಿಎಂಗಳು ಇರಬೇಕು ಎಂದು ಎದ್ದಿರುವ ಕೂಗು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಸ್ಟರ್ ಪ್ಲ್ಯಾನ್ ಫಲ, ಇದು ಅವರದ್ದೇ ಸೃಷ್ಟಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
`ಡಿ.ಕೆ. ಶಿವಕುಮಾರ ಒಬ್ಬರೇ ಡಿಸಿಎಂ ಆಗಿದ್ದರೆ ಶಕ್ತಿ ಕೇಂದ್ರ ಬಲವಾಗಿರುತ್ತದೆ ಮತ್ತು ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ ಇನ್ನಿಬ್ಬರು ಡಿಸಿಎಂಗಳ ಪ್ರತಿಪಾದನೆಯನ್ನು ತೇಲಿ ಬಿಡುವಂತೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ ಬಲ ತಗ್ಗಿಸುವ ಯೋಚನೆ ಸಿದ್ದರಾಮಯ್ಯನವರದ್ದು. ಹೇಗಾದರೂ ಮಾಡಿ ಶಿವಕುಮಾರ ಅವರನ್ನು ಬಲೆಯಲ್ಲಿ ಸಿಗಿಸಿ, ಅವರನ್ನು ಇನ್ನೆರಡು ವರ್ಷದ ನಂತರ ಸಿಎಂ ಮಾಡಬಾರದು ಎಂಬುದು ಸಿದ್ದರಾಮಯ್ಯ ಆಲೋಚನೆ’ ಎಂದು ವ್ಯಂಗ್ಯವಾಡಿದರು.

Previous articleಶಿವಾಜಿ ಮಹಾರಾಜರು ಇಸ್ಲಾಂ ವಿರೋಧಿ ಎಂದವರ ಕೊರಳಪಟ್ಟಿ ಹಿಡೀರಿ…
Next articleಸರ್ಕಾರದ ಮೇಲೆ ಯತ್ನಾಳ ಗರಂ