ಟ್ರಂಪ್ ಟೀಂ ಮೊದಲ ಸಭೆ ಭಾರತದ ಜೊತೆಗೆ!

0
25

ವಾಷಿಂಗ್ಟನ್: ಟ್ರಂಪ್ ಅಧಿಕಾರ ಸ್ವೀಕರಿ ಸಿದ ಕೂಡಲೇ ಮೊದಲ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಭಾರತದ ಜೊತೆ. ಇದು ಭಾರತಕ್ಕೆ ಅಮೆರಿಕ ನೀಡಿರುವ ಮಹತ್ವವನ್ನು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಅಮೆರಿಕದಲ್ಲಿ ಹೊಸ ಆಡಳಿತ ಬಂದ ಕೂಡಲೇ ನೆರೆಯ ದೇಶ ಗಳಾದ ಕೆನಡಾ ಹಾಗೂ ಮೆಕ್ಸಿಕೋ ಅಥವಾ ನ್ಯಾಟೋ ಮಿತ್ರಕೂಟದ ಒಂದು ದೇಶದೊಂದಿಗೆ ಮೊದಲ ದ್ವಿಪಕ್ಷೀಯ ಮಾತುಕತೆ ನಡೆಸಲಾಗುತ್ತಿತ್ತು. ಈ ಸಂಪ್ರದಾಯವನ್ನು ಈ ಬಾರಿ ಟ್ರಂಪ್ ಬದಲಾಯಿಸಿದ್ದಾರೆ. ಅಮೆರಿಕದ ನೂತನ ವಿದೇಶಾಂಗ ಇಲಾಖೆಯ ನೂತನ ಕಾರ್ಯದರ್ಶಿ ಮಾರೋ ರುಬಿಯೋ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಮಾತುಕತೆ ನಡೆಸಿದ್ದಾರೆ.

Previous articleಜಾತ್ರೆಗೆ ಬಂದಿದ್ದ ಬಾಲಕರು ನೀರಲ್ಲಿ ಮುಳುಗಿ ಸಾವು
Next articleರೆಡ್ಡಿ ವಿರುದ್ಧ ತಿರುಗಿ ಬಿದ್ದ ಶ್ರೀರಾಮುಲು