ಜ. ೬ ರಿಂದ ಹುಬ್ಬಳ್ಳಿ- ಹೃಷಿಕೇಶ್ ಗೆ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು

0
25

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಯೋಗನಗರಿ ಎಂದೇ ಕರೆಯಲ್ಪಡುವ ಹೃಷಿಕೇಶಕ್ಕೆ ನೈಋತ್ಯ ರೈಲ್ವೆ ವಲಯವು ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸಿದೆ.

ಜನವರಿ ೬ ರಿಂದ ಮುಂದಿನ ಆದೇಶದವರೆಗೆ ( ಹುಬ್ಬಳ್ಳಿ- ಹೃಷಿಕೇಶ ಸಾಪ್ತಾಹಿಕ ವಿಶೇಷ ರೈಲು – ರೈಲು ಸಂಖ್ಯೆ- ೦೭೩೬೩) ಪ್ರತಿ ಸೋಮವಾರ ೨೦:೩೦ ಗಂಟೆಗೆ ಹುಬ್ಬಳ್ಳಿಯಿಂದ ಹೊರಟು (ಜನವರಿ ೧೩ & ೨೭, ಮತ್ತು ಫೆಬ್ರವರಿ ೦೩,೧೦ & ೨೪, ೨೦೨೫ ರಂದು ಹೊರತುಪಡಿಸಿ) ಬುಧವಾರ ೨೩:೩೦ ಗಂಟೆಗೆ ಯೋಗ ನಗರಿ ರಿಷಿಕೇಶ್ ತಲುಪಲಿದೆ ಎಂದು ತಿಳಿಸಲಾಗಿದೆ.

ಯೋಗ ನಗರಿ ರಿಷಿಕೇಶ್-ಎಕ್ಸಪ್ರೆಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು (ರೈಲು ಸಂಖ್ಯೆ ೦೭೩೬೪) ಜನವರಿ ೦೯ ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಗುರುವಾರ ೦೬:೧೫ ಗಂಟೆಗೆ ಯೋಗ ನಗರಿ ಹೃಷಿಕೇಶದಿಂದ ಹೊರಟು (ಜನವರಿ ೧೬ & ೩೦ ಮತ್ತು ಫೆಬ್ರವರಿ ೦೬, ೧೩ & ೨೭, ೨೦೨೫ ಹೊರತುಪಡಿಸಿ) ಶನಿವಾರ ೦೬:೩೦ ಗಂಟೆಗೆ ಹುಬ್ಬಳ್ಳಿಯನ್ನು ತಲುಪಲಿದೆ.

ಈ ರೈಲು ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಕೋಪರ್ಗಾಂವ್, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಹರ್ದಾ, ಇಟಾರ್ಸಿ ಜಂಕ್ಷನ್, ರಾಣಿ ಕಮಲಪತಿ, ಬೀನಾ ಜಂಕ್ಷನ್, ವಿರಂಗನಾ ಲಕ್ಷ್ಮಿಬಾಯಿ ಝಾನ್ಸಿ ರೈಲ್ವೆ ನಿಲ್ದಾಣ, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆAಟ್, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್ ಜಂಕ್ಷನ್, ಗಾಜಿಯಾಬಾದ್ ಜಂಕ್ಷನ್, ಮೀರತ್ ಸಿಟಿ ಜಂಕ್ಷನ್, ಮುಜಾಫರ್ ನಗರ, ದಿಯೋಬಂದ್, ತಾಪ್ರಿ ಜಂಕ್ಷನ್, ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ವಿಶೇಷ ರೈಲು ನಾಲ್ಕು ಎಸಿ -೩ ಟೈರ್ ಸ್ಲೀಪರ್ ಮತ್ತು ಎರಡು ಗಾರ್ಡ್ಸ್ ಬ್ರೇಕ್ ವ್ಯಾನ್ ಮತ್ತು ಎಂಟು ಎಸಿ -೩ ಟೈರ್ ಸೇರಿದಂತೆ ೧೪ ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

Previous articleವಸತಿಗೃಹದಲ್ಲಿ ಇಂಜಿನೀಯರ್ ಆತ್ಮಹತ್ಯೆ
Next articleಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುವಂತಾಗಬೇಕು