ಜೋಳದ ಹಿಟ್ಟಿನ ಸ್ವೀಟ್

0
69
  • ಬೇಕಾಗುವ ಸಾಮಗ್ರಿಗಳು: ಎರಡು ಕಪ್ ಹಾಲು, ಮೊಸರು ಎರಡು ಕಪ್, ಜೋಳದ ಹಿಟ್ಟು ಎರಡು ಚಮಚ, ಏಲಕ್ಕಿ ಪುಡಿ ಒಂದು ಚಮಚ, ಸಕ್ಕರೆ ಎರಡು ಕಪ್ (ಅಥವಾ ರುಚಿಗೆ ತಕ್ಕಷ್ಟು)

ಮಾಡುವ ವಿಧಾನ : ಬಾಣಲೆಯಲ್ಲಿ ಅರ್ಧದಷ್ಟು ಸಕ್ಕರೆ ಹಾಕಿ ಸ್ಟೋವ್ ಮೇಲೆ ಚಿಕ್ಕ ಉರಿಯಲ್ಲಿ ಇಡಬೇಕು. ಸಕ್ಕರೆಗೆ ನೀರು ಹಾಕದೆ ಹಾಗೆ ತಿರುಗಿಸುತ್ತಾ ಇರಬೇಕು. ಒಂದೆರಡು ನಿಮಿಷದ ನಂತರ ಹಾಲು ಹಾಕುತ್ತಾ ಕಲಸಬೇಕು. ಬಣ್ಣ ಬದಲಾವಣೆ ಆಗಬೇಕು. ಇನ್ನೊಂದೆಡೆ ಒಂದು ಪಾತ್ರ ತೆಗೆದುಕೊಂಡು ಅದರಲ್ಲಿ ಮೊಸರು ಹಾಕಿ ಜೋಳದ ಹಿಟ್ಟು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದರಲ್ಲಿ ಉಳಿದ ಸಕ್ಕರೆ ಹಾಕಿ, ಸಕ್ಕರೆ ಹಾಲಿನ ಜತೆ ಸೇರಿಸಿ. ಇದನ್ನು ೧೫ ನಿಮಿಷಗಳ ಕಾಲ ಕುಕ್ಕರ್‌ನಲ್ಲಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಕರ ಸ್ವೀಟ್ ರೆಡಿ. ಬೇಕಿದ್ದರೆ ಡ್ರೈಫ್ರುಟ್ಸ್ ಹಾಕಿಕೊಳ್ಳಬಹುದು.

ಮಹಾದೇವಿ ಜೇವೂರ್, ಕಲಬುರಗಿ

Previous articleNEET UG 2024 ಕೌನ್ಸೆಲಿಂಗ್ ಮುಂದೂಡಿಕೆ
Next articleಸಿಕಂದರಾಬಾದ್‌ – ವಾಸ್ಕೊ ಡ ಗಾಮಾ ನೂತನ ರೈಲಿಗೆ ಅನುಮೋದನೆ