ಕಲಬುರಗಿ: ಜಿಮ್ಸ್ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗದಲ್ಲಿನ ನವಜಾತ ಶಿಶು ಅಪಹರಣ ಪ್ರಕರಣವಮ್ನ ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಲಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಜಿಲ್ಲಾ ಆಸ್ಪತ್ರೆಯಿಂದ ನವಜಾತ ಶಿಶು ಕಿಡ್ನಾಪ್ ಪ್ರಕರಣ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಭೇಟಿ ನೀಡಿದರು.
ಆಸ್ಪತ್ರೆಯಲ್ಲಿ ಮಗುವಿನ ಕುಟುಂಬಸ್ಥರಗೆ ಭೇಟಿ ಮಾಡಿ ಮಾಹಿತಿ ಪಡೆದು ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಸಚಿವ ಡಾ. ಪ್ರಕಾಶ್ ಪಾಟೀಲ್, ಮಗು ಕಾಣೆಯಾಗಿರುವ ಬಗ್ಗೆ ವಿವರ ಪಡೆದಿದ್ದೇನೆ. ನರ್ಸ್ ವೇಷದಲ್ಲಿ ಇಬ್ಬರು ಮಹಿಳೆಯರು ಬಂದು ಮಗು ಅಪಹರಿಸಿದ್ದು ಸಿಸಿ ಕ್ಯಾಮರಾದೃಷ್ಯದಲ್ಲಿ ಕಂಡುಬಂದಿದೆ. ತಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು.
ಮಗುವಿನ ಪತ್ತೆಗಾಗಿ ಪೊಲೀಸ್ ಕಮಿಷನರ್ ಜೊತೆ ಚರ್ಚಿಸಿದ್ದೇನೆ. ನಗರ ಪೊಲೀಸ್ ಆಯುಕ್ತರು ಮಗುವಿನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ನೆಗ್ಲಿಜೆನ್ಸಿ ಇದರಲ್ಲಿ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.