ಜಾತಿಗಣತಿ ಪ್ರತಿ ಕೈಸೇರಿಲ್ಲ

0
31

ಕಲಬುರಗಿ: ಏಪ್ರಿಲ್ ೧೭ ರಂದು ಜಾತಿ ಗಣತಿ ವರದಿ ಚರ್ಚೆ ಬಗ್ಗೆ ವಿಶೇಷ ಸಚಿವ ಸಂಪುಟ ಕರೆಯಲಾಗಿದ್ದು, ಆದರೆ ಇನ್ನೂ ವರದಿ ಪ್ರತಿ ಕೈಸೇರಿಲ್ಲ. ವರದಿ ಓದಿದ ನಂತರ ಪ್ರತಿಕ್ರಿಯಿಸುವುದು ಸೂಕ್ತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು‌.

ಬಸವ ಜಯಂತಿ ಪೂರ್ವಸಿದ್ದತಾ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ‌ ಕ್ಯಾಬಿನೆಟ್ ಸಭೆಯಲ್ಲಿ ಅದರ‌ ಲಕೋಟೆ ಓಪನ್ ಮಾಡಲಾಗಿದೆ.

ಎಲ್ಲಾ ಸಚಿವರು ಅದನ್ನು ಓದಿಕೊಂಡು ಬರಲು ಸಿಎಂ ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ತೀರ್ಮಾನ ಆಗಿಲ್ಲ, ನಮ್ಮ ಕೈಗೆ ಎರಡು ದಿನದಲ್ಲಿ ಜಾತಿಗಣತಿ ಪ್ರತಿ ಬರಲಿದೆ. ಅದನ್ನು ಓದಿದ ಬಳಿಕವೇ ಚರ್ಚೆ ಮಾಡಿ ನಮ್ಮ ಅಭಿಪ್ರಾಯ ಹೇಳುತ್ತೆವೆ. ಪತ್ರಿಕೆಗಳಲ್ಲಿ ಕೆಲವೊಂದಿಷ್ಟು ಅಂಕಿ ಅಂಶಗಳು ಪ್ರಕಟವಾಗಿವೆ ಅದು ಊಹೆ ಮಾಡಿ ಬರೆದಿದ್ದಾರೆ. ನಾನು ಯಾವುದೇ ವಿಷಯ ಓದದೆ ಸಹಿ ಮಾಡಲ್ಲ, ಊಹೆ ಮಾಡಿಕೊಂಡು ಏನು ಹೇಳಲ್ಲ ಎಂದರು.

Previous articleಬ್ರಾಹ್ಮಣ ಮಹಾಸಭಾದ ಚುನಾವಣೆ ವೇಳೆ ಗೊಂದಲ
Next articleಬ್ರಾಹ್ಮಣ ಮಹಾಸಭಾ ಚುನಾವಣೆ:ಮಧ್ಯಾಹ್ನದ ವೇಳೆಗೆ ದಾವಣಗೆರೆ ಜಿಲ್ಲೆ ಶೇ. ೪೮, ಚಿತ್ರದುರ್ಗ ಜಿಲ್ಲೆ ಶೇ. ೩೮ ಮತದಾನ