ನಸುಕಿನ 4 ಗಂಟೆಯ ಸಮಯದಲ್ಲಿ ಚಿರತೆ ನಡೆಸಿದ ದಾಳಿಗೆ ಆಕಳು ಬಲಿ
ಧಾರವಾಡ : ಮನಸೂರ ಗ್ರಾಮದ ಹಳ್ಳದ ಕರೆಮ್ಮನ ಗುಡಿ ಹತ್ತಿರದ ಮಡಿವಾಳಪ್ಪ ಅಗಸರ್ ಎಂಬುವವರ ಮನೆಯಲ್ಲಿ ನಸುಕಿನ 4 ಗಂಟೆಯ ಸಮಯದಲ್ಲಿ ಚಿರತೆ ನಡೆಸಿದ ದಾಳಿಗೆ ಆಕಳು ಬಲಿಯಾಗಿದೆ.
ಗುರುವಾರ ತಡರಾತ್ರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಕಾಣಿಸಿಕೊಂಡ ಚಿರತೆ ಶುಕ್ರವಾರ ಬೆಳಿಗ್ಗೆ ಮನಸೂರ ಗ್ರಾಮದಲ್ಲಿ ಕಾಣಿಸಿಕೊಂಡು ದಾಳಿ ನಡೆಸಿರುವ ಸಾಧ್ಯತೆ ಇದೆ. ಇದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ವಲಯಾಧಿಕಾರಿ ಪ್ರದೀಪ ಪವಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಚಿರತೆಗಾಗಿ ಬೋನು ಇಡಲು ಕ್ರಮ ಕೈಗೊಂಡಿದ್ದಾರೆ.