ಚಂದ್ರಶೇಖರನ್‌ಗೆ ಯುಕೆ ನೈಟ್‌ಹುಡ್ ಪ್ರಶಸ್ತಿ

0
24

ಬೆಂಗಳೂರು: ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಯುಕೆ ನೈಟ್‌ಹುಡ್ ‘ಮೋಸ್ಟ್ ಎಕ್ಸಲೆನ್ಸ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡು ಶುಭ ಕೋರಿದ್ದಾರೆ ಯುಕೆ-ಭಾರತ ವ್ಯವಹಾರ ಸಂಬಂಧಗಳಿಗೆ ನೀಡಿದ ಸೇವೆಗಾಗಿ ಕಿಂಗ್ ಚಾರ್ಲ್ಸ್ ಅವರಿಂದ ಯುನೈಟೆಡ್ ಕಿಂಗ್‌ಡಮ್ ’ಗೌರವ ನೈಟ್‌ಹುಡ್’ ಪ್ರಶಸ್ತಿ ಪಡೆದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಹಾರ್ದಿಕ ಅಭಿನಂದನೆಗಳು. “ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ಆದೇಶ (ನಾಗರಿಕ ವಿಭಾಗ) – ಗೌರವ” ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

Previous articleಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ: ಫೆ.18ರಂದು ಪ್ರತಿಭಟನೆ
Next articleಅಶ್ವಿನಿ ವೈಷ್ಣವ್ ಭೇಟಿ ಮಾಡಿದ ಬಿ ವೈ ವಿಜಯೇಂದ್ರ