ಗೋಕಾಕ ತಹಶೀಲ್ದಾರ್ ವಿರುದ್ಧ ಎಫ್‌ಐಆರ್

0
22

ಗೋಕಾಕ: ಗೋಕಾಕ ತಹಶೀಲ್ದಾರ್ ಮೋಹನ್ ಭಸ್ಮೆ ಸೇರಿ 5 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಾಲೂಕಿನ ಮಮದಾಪುರ ಗ್ರಾಮದ ಸಂಗೀತ ಬನ್ನೂರ ಎನ್ನುವವರಿಗೆ ಸೇರಿದ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಎಂಬುವವರಿಗೆ ಅಕ್ರಮವಾಗಿ ಪರಭಾರೆ ಮಾಡಿಕೊಟ್ಟ ಆರೋಪದಲ್ಲಿ ಭಸ್ಮೆ ಸೇರಿದಂತೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಗೀತ ಬನ್ನೂರ ಅವರಿಗೆ ಸೇರಿದ 4‌ ಎಕರೆ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಅವರ ಆಮಿಷಕ್ಕೊಳಗಾಗಿ ಅವರ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ ಎಂದು ದೂರು ನೀಡಲಾಗಿದೆ. ಗುಲಾಬ್ ಒಸ್ವಾಲ್, ಕಂದಾಯ ನಿರೀಕ್ಷಕ ಎಸ್.ಎಂ. ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ತುಕಾರಾಂ, ಲ್ಯಾಂಡ್ ಸರ್ವೇಯರ್ ತಿಮ್ಮಯ್ಯ ಇನ್ನಿತರ ಆರೋಪಿಗಳಾಗಿದ್ದಾರೆ.

Previous articleಈ ಜೋಕರೇ ಮುಂದೆ ರಾಜ್ಯವಾಳುವುದು
Next articleಹೈಕಮಾಂಡ್ ನಿರ್ಧಾರ ಅಂತಿಮ