ಗಣೇಶ ವಿಸರ್ಜನೆ ವೇಳೆ ಗಾಳಿಯಲ್ಲಿ ಗುಂಡು

0
34

ಸಿಂದಗಿ: ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪೋಸ್ ಕೊಟ್ಟಿರುವ ಘಟನೆ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮರಗಮ್ಮದೇವಿ ಗಜಾನನ ಯುವಕ ಮಂಡಳಿಯ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದೀಗ ಆರೋಪಿಗಳಾದ ಪ್ರಶಾಂತ ಬಿರಾದಾರ ಹಾಗೂ ಮುದಕಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್​ ಬಿರಾದಾರ ಬಳಿಯಿದ್ದ ಪರವಾನಿಗೆ ಹೊಂದಿದ ಪಿಸ್ತೂಲ್​ನಿಂದ ಮುದಕಪ್ಪ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಇದಕ್ಕೂ ಮೊದಲು ಪ್ರಶಾಂತ್​ ಬಿರಾದಾರ್ ಕೂಡ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಪರವಾನಿಗೆ ಹೊಂದಿದ ಪಿಸ್ತೂಲ್​ನನ್ನು ಮತ್ತೊಬ್ಬರ ಕೈಗೆ ಕೊಟ್ಟ ಪ್ರಶಾಂತ್​, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ.

Previous articleಬಾಗಲಕೋಟೆಯಲ್ಲಿ ಪ್ಯಾಲೆಸ್ತೈನ್ ಧ್ವಜ ಪ್ರದರ್ಶನ
Next articleಡ್ರಗ್ಸ್ ಜಾಲ ಕಡಿವಾಣಕ್ಕೆ ಟಾಸ್ಕ್‌ಫೋರ್ಸ್‌ ರಚನೆ