ಖಾನಾಪುರದಲ್ಲಿ ಚೋರರ ಕೈ ಚಳಕ: ಹಾಡುಹಗಲೇ ಮನೆಕಳವು

0
34

ಬೆಳಗಾವಿ: ಖಾನಾಪುರದಲ್ಲಿ ಕಳ್ಳರ ಕೈ ಚಳಕ ಜೋರಾಗಿದ್ದು, ಹಾಡುಹಗಲೇ ಮನೆಕಳವು ಪ್ರಕರಣಗಳು ಜಾಸ್ತಿಯಾಗಿವೆ.
ಖಾನಾಪೂರ ತಾಲೂಕಿನ ಗುಂಜಿ ಗ್ರಾಮದಲ್ಲಿನ ಎಂಟು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಬಂಗಾರದ ಆಭರಣ, ನಗದು ಹಣವನ್ನು ಕದ್ದೊಯ್ಯಲಾಗಿದೆ.
ಉಮೇಶ ತಮುಚೆ ಎಂಬುವರ ಬೀಗ ಹಾಕಿದ ಮನೆಗೆ ನುಗ್ಗಿ ನಾಲ್ಕು ಲಕ್ಷದ ಚಿನ್ನಾಭರಣ ಕದಿಯಲಾಗಿದೆ. ಅದೇ ರೀತಿ ಕೆಲಸದ ನಿಮಿತ್ಯ ಹೊರಗೆ ಹೋಗಿದ್ದ ವಿನಾಯಕ ಪುಂಡಲೀಕ ಘಾಡಿ, ಮಹಾದೇವ ಕರಂಬಳಕರ, ಮುಲ್ಲಾ ಮತ್ತು ತುಕಾರಾಮ ಘಾಡಿ ಅವರ ಮನೆಗಳಲ್ಲಿ ಬೀಗಗಳನ್ನು ಮುರಿದು ಕಳವು ನಡೆಸಲು ಪ್ರಯತ್ನಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleರಾಜ್ಯಪಾಲರ ಹೆಸರಿನ ಆಸ್ತಿ ಕಬಳಿಕೆ
Next articleದುಬಾರಿ ಫೋನ್ ಖರೀದಿಸಿದ್ದಕ್ಕೆ ತಂದೆ ಬುದ್ಧಿವಾದ: ಪುತ್ರ ಆತ್ಮಹತ್ಯೆ