ಕ್ರೀಮಿನಾಶಕ ಸೇವಿಸಿ ರೈತರು ಆತ್ಮಹತ್ಯೆಗೆ ಯತ್ನ

0
27

ಬೀದರ್ : ಕಾರಂಜಾ ಸಂತ್ರಸ್ತರಿAದ ಸಚಿವರಿಗೆ ನೀಡಿದ ಗಡವು ಮುಗಿದ ಹಿನ್ನಲೆ ಧರಣಿ ಸ್ಥಳದಲ್ಲಿಯೇ ಇಬ್ಬರು ರೈತರು ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗ ಕಾರಂಜಾ ಸಂತ್ರಸ್ತರು ವೈಜ್ಞಾನಿಕ ಪರಿಹಾರಕ್ಕಾಗಿ ಕಳೆದ ೮೯೦ ದಿನಗಳಿಂದ ಧರಣಿ ನಡೆಸುತ್ತಿದ್ದರು. ಪರಿಹಾರಕ್ಕಾಗಿ ಸಚಿವರಿಗೆ ನೀಡಿದ ಗಡವು ಮುಗಿದಿದ್ದರಿಂದ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ರೈತರನ್ನು ಬ್ರಿಮ್ಸ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ಮಾಡ್ತಾರಾ?
Next articleವಿಶ್ವ ಚೆಸ್ ಚಾಂಪಿಯನ್ ಆದ ಗುಕೇಶ್