ಕ್ರಿಕೆಟ್ ಪ್ರೇಮಿಗಳಿಗೆ ಶುಭಸುದ್ದಿ ನೀಡಿದ ನಮ್ಮ ಮೆಟ್ರೋ

0
50

ಬೆಂಗಳೂರು: ನಮ್ಮ ಮೆಟ್ರೋ ಕ್ರಿಕೆಟ್ ಪ್ರೇಮಿಗಳಿಗೆ ಶುಭಸುದ್ದಿಯನ್ನು ನೀಡಿದೆ. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆಯನ್ನು  ಮರುದಿನ ಮುಂಜಾನೆ 12.30ರ ವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ರಾತ್ರಿ 12:30ರವರೆಗೂ ಮೆಟ್ರೋ ಸಂಚರಿಸಲಿದ್ದು. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ನಾಲ್ಕು ಟರ್ಮಿನಲ್‌ಗಳಿಗೂ ಮಧ್ಯರಾತ್ರಿ 1:15ಕ್ಕೆ ಹೊರಡಲಿದೆ. ಏ.8, ಏ.10, ಏ.18, ಏ.24, ಮೇ 3, 13 ಮತ್ತು 17ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ನಾಳೆ (ಏ.2) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ತಂಡದ ನಡುವೆ ಮೊದಲ ಪಂದ್ಯ ನಡೆಯಲಿದೆ. 

Previous articleಐತಿಹಾಸಿಕ ದೇವಾಲಯಗಳನ್ನು ವಕ್ಫ್ ವಶಪಡಿಸಿಕೊಂಡಿದೆ
Next articleವಿಜಯಪುರ ಜಿಲ್ಲೆಯಲ್ಲಿ ಭೂಕಂಪನ