ಕೊಲೆ ಆರೋಪಿ ಬಂಧನ

0
16

ಹುಬ್ಬಳ್ಳಿ: ಹಣಕಾಸಿನ ವಿಚಾರದಲ್ಲಿ ಓರ್ವನನ್ನು ಕೊಲೆ ಮಾಡಿ, ಪರಾರಿಯಾಗಿದ್ದ ಆರೋಪಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸೋನಿಯಾಗಾಂಧಿ ನಗರದ ನಿವಾಸಿ ಕುಮಾರ ಬೆಟಗೇರಿ(೫೭) ಎಂಬಾತನ ಕೊಲೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಪೊಲೀಸರು ದೇವಾಂಗಪೇಟೆ ನಿವಾಸಿ ಗೌಸ್ ಮೊಹಮ್ಮದ್ ನದಾಫ್(೪೦) ಎಂಬಾತನನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಹಣಕಾಸಿನ ವಿಚಾರವಲ್ಲದೆ, ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಈ ಕುರಿತು ಕೂಡ ತನಿಖೆ ನಡೆಸುತ್ತಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಶಾಸಕರ ಕೊಲೆ ಸಂಚು: ಬಿಜೆಪಿ ದಿಢೀರ್ ಪ್ರತಿಭಟನೆ
Next articleಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಆಪ್ತರ ವಿರುದ್ಧ FIR