ಕೇಂದ್ರದ ವಿರುದ್ದ ಕಪ್ಪುಪತ್ರ ಬಿಡುಗಡೆ

0
13

ನವದೆಹಲಿ: ಕೇಂದ್ರ ಸರ್ಕಾರ ‘ಶ್ವೇತಪತ್ರ’ ಮಂಡಿಸಲು ಉದ್ದೇಶಿಸಿದ್ದು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ‘ಕಪ್ಪು ಪತ್ರ’ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ 10 ವರ್ಷಗಳ ಆಡಳಿತದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಪ್ಪು ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಂದಿಗೂ ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಕೇರಳ ಕರ್ನಾಟಕ ತೆಲಂಗಾಣ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಬಿಜೆಪಿಯೇತರ ರಾಜ್ಯಗಳಿಗೆ ತಾರತಮ್ಯ ಮಾಡಲಾಗುತ್ತಿದೆ. ಸಿಬಿಐ, ಐಟಿ,ಇಡಿಯನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಯಾತ್ರೆಗೂ ಅಡ್ಡಿಪಡಿಸುವ ಕೆಲಸವಾಗುತ್ತಿದೆ. ಪ್ರಧಾನಿಯಾಗಿ ಮೋದಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಉದ್ಯೋಗ ಸೃಷ್ಠಿಸುವಲ್ಲಿ ವಿಫಲ, ಹಣದುಬ್ಬರ ತಡೆಯಲು ವಿಫಲವಾಗಿದೆ. ಕೇಂದ್ರ ಸರ್ಕಾರ ಕೆಲವು ಉದ್ಯಮಿಗಳ ಪರವಾಗಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆರ್ಥಿಕ ಸಾಧನೆಯನ್ನು ಬಿಜೆಪಿ ನೇತೃತ್ವದ 10 ವರ್ಷಗಳ ಆರ್ಥಿಕ ಸಾಧನೆಯೊಂದಿಗೆ ಹೋಲಿಸಿ ‘ಶ್ವೇತಪತ್ರ’ ಹೊರತರುವುದಾಗಿ ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆ ಘೋಷಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಬ್ಲ್ಯಾಕ್​ ಪೇಪರ್​(ಕಪ್ಪುಪತ್ರ) ಬಿಡುಗಡೆ ಮಾಡಿದೆ.

Previous articleಇಎಂಐ ಪಾವತಿದಾರರಿಗೆ ಆರ್‌ಬಿಐ ಸಿಹಿ ಸುದ್ದಿ
Next articleಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕು