ಕುಕ್ಕೆ ದೇಗುಲ ಆದಾಯ ಮತ್ತೆ ರಾಜ್ಯಕ್ಕೆ ಪ್ರಥಮ

0
13

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ೨೦೨೩ರ ಏಪ್ರಿಲ್‌ನಿಂದ ೨೦೨೪ರ ಮಾರ್ಚ್ ೩೧ರ ತನಕದ ಆರ್ಥಿಕ ವರ್ಷದಲ್ಲಿ ೧೪೬.೦೧ ಕೋಟಿ ರೂ. ಆದಾಯ ಗಳಿಸಿದೆ. ಈ ಮೂಲಕ ಸತತ ೧೩ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ವನ್ ದೇವಸ್ಥಾನವಾಗಿ ಮುಂದುವರಿದಿದೆ. ಕಳೆದ ವರ್ಷ ದೇವಸ್ಥಾನವು ೧೨೩ ಕೋಟಿ ರೂ. ಆದಾಯ ಗಳಿಸಿತ್ತು.
ಉಳಿದಂತೆ ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ೬೮.೨೩ ಕೋಟಿ ರೂ. (ಕಳೆದ ವರ್ಷ ೫೯.೪೭ ಕೋ.ರೂ.) ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ೩೦.೭೩ ಕೋಟಿ ರೂ., ಸವದತ್ತಿ ರೇಣುಕಾ ಯಲ್ಲಮ್ಮ ೨೫.೮೦ ಕೋ.ರೂ., ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ೧೫.೨೭ ಕೋ.ರೂ., ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ ೧೬.೨೯ ಕೋ.ರೂ., ಘಾಟಿ ಸುಬ್ರಹ್ಮಣ್ಯ ಸ್ವಾಮಿ
ದೇವಸ್ಥಾನ ೧೩.೬೫ ಕೋ.ರೂ., ಬೆಂಗಳೂರಿನ ಬನಶಂಕರಿ ದೇವಸ್ಥಾನ ೧೧.೩೭ ಕೋ.ರೂ. ಆದಾಯ ಗಳಿಸಿದೆ.
ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋಟದ ಉತ್ಪನ್ನ ದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿ ಯಿಂದ, ಹರಕೆ ಸೇವೆಗಳಿಂದ, ಅನು ದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆ?ಗಳಿಂದ ಆದಾಯ ಬರುತ್ತಿದೆ. ದೇವಸ್ಥಾನದ ಆದಾಯದ ಒಟ್ಟು ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಉಳಿದಂತೆ ಸೇವೆ ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ನಡೆಯುತ್ತಿದ್ದು ಈ ಲೆಕ್ಕಾಚಾರವು ಇನ್ನೆರಡು ದಿನಗಳಲ್ಲಿ ದೊರಕಲಿದೆ.

Previous articleದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಇಂದು ನಿರ್ಧಾರ
Next articleರಾಜ್ಯದಲ್ಲಿ ಕಾಲರಾ ಅಬ್ಬರ