ಕಾರ್ಮಿಕರಿಗೆ ಮಾಲೀಕರಿಂದಲೇ ಪರಿಹಾರ ಕೊಡಿಸಬೇಕು

0
45

ಭಟ್ಟಿಗೆ ನೀಡಿದ ವ್ಯಾಪಾರ ಪರವಾನಗಿ ಹಿಂಪಡೆದು ಬೀಗ ಜಡಿಯಬೇಕು.

ಬೆಂಗಳೂರು: ವಿಜಯಪುರ ನಗರದ ಹೊರಭಾಗದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ  ಕಾರ್ಮಿಕರ ಮೇಲೆ ಮಾಲೀಕರು   ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ಸಂಗತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇಟ್ಟಿಗೆ ಭಟ್ಟಿಯಲ್ಲಿ 600 ರೂ ಕೂಲಿಗೆ  ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಕ್ರಾಂತಿಗೆ ಮನೆಗೆ ತೆರಳಿ ಜನವರಿ 16 ರಂದು ಭಟ್ಟಿಗೆ ಬಂದಿದ್ದರು

ಭಟ್ಟಿಯಲ್ಲಿ ಕೆಲಸ ಮಾಡಲು ಒಪ್ಪದ ಕಾರ್ಮಿಕರು ಮನೆಗೆ ಹೋಗಲು  ಮುಂದಾಗಿದ್ದರು. ಇದರಿಂದ ಕುಪಿತಗೊಂಡ ಮಾಲೀಕ ಖೇಮು ರಾಠೋಡ ಕಾರ್ಮಿಕರನ್ನು  ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ.

ಭಟ್ಟಿಗೆ ನೀಡಿದ ವ್ಯಾಪಾರ ಪರವಾನಗಿಯನ್ನು ಸರ್ಕಾರ ಕೂಡಲೇ ಹಿಂಪಡೆದು ಭಟ್ಟಿಗೆ ಬೀಗ ಜಡಿಯಬೇಕು. ಹಲ್ಲೆಗೊಳಗಾದ ಕಾರ್ಮಿಕರಿಗೆ ಮಾಲೀಕರಿಂದಲೇ ಪರಿಹಾರ ಕೊಡಿಸಬೇಕು ಎಂದಿದ್ದಾರೆ.

Previous articleಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
Next articleಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ:  ಜಾಮೀನು ರಹಿತ ಬಂಧನ ವಾರೆಂಟ್