ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ

0
6
ಕೊಲೆ

ವಿಜಯಪುರ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆಯಲ್ಲಿ ನಡೆದಿದೆ.
ನಗರದ ಕಂವಾರ ಓಣಿ ನಿವಾಸಿ ೨೨ ವರ್ಷದ ರೋಹಿತ್ ಸುಭಾಶ ಪವಾರ ಎಂಬ ಯುವಕನ ಮುಖ ಸೇರಿದಂತೆ ದೇಹದ ಇತರೆ ಭಾಗಗಳನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ ಮುಳ್ಳುಕಂಟಿಯಲ್ಲಿ ಶವ ಬಿಸಾಡಿ ಹೋಗಿದ್ದಾರೆ.
ಸ್ಥಳದಲ್ಲಿ ಬಿಯರ್ ಬಾಟಲ್, ಚಿಪ್ಸ್ ಪ್ಯಾಕೇಟ್ ಪತ್ತೆಯಾಗಿದ್ದು, ಪರಿಚಿತರೇ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ರೋಹಿತ ಸ್ನೇಹಿತ ಖಾಲೀದ್ ಮನೆಗೆ ಹೋದರೂ ಅಲ್ಲಿಯೂ ರೋಹಿತ ಇರಲಿಲ್ಲ. ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ. ಕುಟುಂಬಸ್ಥರಿಂದ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleತಾಯಿ ಶವದ ಜತೆ ೪ ದಿನ ಕಳೆದ ಪುತ್ರಿಯೂ ಸಾವು
Next articleಇಬ್ಬರು ಯುವತಿಯರ ಹತ್ಯೆ ನಮಗೂ ನೋವುಂಟು ಮಾಡಿದೆ