ಕಲಬುರಗಿ: ಹಲವು ದಶಕಗಳ ಬೇಡಿಕೆಯಾಗಿರುವ ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆಗೆ ಆಗ್ರಹಿಸಿ ಶುಕ್ರವಾರ ಬೆಳಿಗ್ಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಕೆಕೆಸಿಸಿಐ) ಸಂಸ್ಥೆ ನೇತೃತ್ವದಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ತಡೆಗೆ ಯತ್ನಿಸಲಾಯಿತು.
ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ರೈಲ್ವೇ ನಿಲ್ದಾಣದವರೆಗೆ ಸಾವಿರಾರು ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೆ ನುಗ್ಗಲು ಹೊರಟಾಗ ನಗರ ಪೊಲೀಸ್‌ರು ರೈಲು ನಿಲ್ದಾಣ ಮುಂಭಾಗದಲ್ಲೇ ಬ್ಯಾರಿಕೇಡ್‌ಗಳ ಮೂಲಕ ತಡೆ ಹಿಡಿಯಲಾಯಿತು. ಇದಕ್ಕೆ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ, ಹತ್ತು ಪ್ರಮುಖ ಹೋರಾಟಗಾರರನ್ನು ನಿಲ್ದಾಣದೊಳಗೆ ಬಿಡಲಾಯಿತು. ಆದರೆ ಮುಂದೆ ರೈಲು ತಡೆಗೆ ಮುಂದಾದಾಗ ರೈಲ್ವೇ ಅಧಿಕಾರಿಗಳು ಹಾಗೂ ರೈಲ್ವೇ ಪೊಲೀಸ್‌ರು ರೈಲು ತಡೆಗೆ ಅವಕಾಶ ಮಾಡಿಕೊಡಲಿಲ್ಲ.
ರೈಲ್ವೇ ಅಧಿಕಾರಿಗಳು, ರೈಲು ತಡೆಗೆ ಅವಕಾಶ ಮಾಡಿ ಮಾಡದೇ ನಮಗೆ ಮನವಿ ಸಲ್ಲಿಸಿ, ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇವೆ. ಮುಂಚೆಯೇ ರೈಲು ತಡೆಗೆ ಮನವಿ ಕೊಡಬೇಕಿತ್ತು. ಹೀಗಾಗಿ ರೈಲು ತಡೆಗೆ ಅವಕಾಶ ಕೊಡೊದಿಲ್ಲ ಎಂದಾಗ, ಕೆಕೆಸಿಸಿಐ ಪದಾಧಿಕಾರಿಗಳು, ವಾಣಿಜ್ಯೊದ್ಯಮಿಗಳು ಘೋಷಣೆ ಕೂಗಿ ರೈಲ್ವೇ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು, ತಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಮನವಿಯನ್ನು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಪೊಲೀಸ್‌ರು ರೈಲು ತಡೆ ಯತ್ನ ವಿಫಗೊಳಿಸಿದ್ದರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮೊದಲೇ ಪ್ರತಿಭಟನೆ ನಡೆಸಿ ರೈಲು ತಡೆ ಮಾಡುವುದಾಗಿ ತಿಳಿಸಲಾಗಿದ್ದರೂ ರೈಲು ತಡೆಗೆ ಅವಕಾಶ ಮಾಡಿಕೊಡಲಿಲ್ಲ. ಇದು ಈ ಭಾಗದ ಬಗ್ಗೆ ಹೊಂದಿರುವ ಧೋರಣೆ ಸ್ಪಷ್ಠಪಡಿಸುತ್ತದೆ. ಹೋರಾಟ ಇಲ್ಲಿಗೆ ನಿಲ್ಲಿಸೋದಿಲ್ಲ. ಮುಂದಿನ ದಿನಗಳ ಕೇಂದ್ರ ಕಚೇರಿಗಳಿಗೆ ಹಂತ-ಹAತವಾಗಿ ಮುತ್ತಿಗೆ ಹಾಕಲಾಗುವುದು. ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ೩೭೧ಜೆ ವಿಧಿ ಮಾದರಿಯಲ್ಲಿ ಹೋರಾಟ ರೂಪಿಸಲಾಗುವುದು ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಮಾಜಿ ಅಧ್ಯಕ್ಷ ಉಮಾಕಾಂತ ಪಾಟೀಲ್, ಪದಾಧಿಕಾರಿಗಳಾದ ಶರಣು ಪಪ್ಪಾ, ಅರುಣಕುಮಾರ ಪಾಟೀಲ್, ಸುನೀಲ್ ಕುಲಕರ್ಣಿ, ಮಂಜುನಾಥ ಜೇವರ್ಗಿ ಮುಂತಾದವರು ಮಾತನಾಡಿ ಎಚ್ಚರಿಕೆ ನೀಡಿದರು.
ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಮುಖ ಕಾರ್ಯಗಳಾಗುತ್ತಿಲ್ಲ. ನಿರ್ಲಕ್ಷö್ಯತನದಿಂದ ಯಾವುದೇ ಯೋಜನೆ ಹಾಗೂ ಕೈಗಾರಿಕೆಗಳು ಬರುತ್ತಿಲ್ಲ. ಆದರೆ ಕಳೆದ ನಾಲ್ಕು ದಶಕಗಳ ಬೇಡಿಕೆಯಾಗಿರುವ ಅದರಲ್ಲೂ ಅತ್ಯಂತ ಸಮಂಜಸವಾಗಿರುವ ಕಲಬುರಗಿಯಲ್ಲಿನ ರೈಲ್ವೇ ವಿಭಾಗೀಯ ಕಚೇರಿಯನ್ನಾದರೂ ಸಾಕಾರಗೊಳಿಸುವಂತೆ ಹೋರಾಟಕ್ಕೆ ಧುಮುಕಲಾಗಿದೆ. ೨೦೧೪ರಲ್ಲಿ ಜಮ್ಮು ಹಾಗೂ ಕಲಬುರಗಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆ ನಿಟ್ಟಿನಲ್ಲಿ ಸಂಸತ್ತಿನಲ್ಲಿ ನಡೆದ ವೋಟ್ ಆನ್ ಅಕೌಂಟ್ ಬಜೆಟ್‌ದಲ್ಲಿ ಘೋಷಿಸಲಾಗಿದೆ. ಅದಲ್ಲದೇ ಕಲಬುರಗಿ ರೈಲ್ವೇ ವಿಭಾಗಕ್ಕೆ ವಿಶೇಷ ಕರ್ತವ್ಯಾಧಿಕಾರಿಯನ್ನು ಸಹ ನೇಮಿಸಲಾಗಿತ್ತು. ಪ್ರಮುಖವಾಗಿ ರೈಲ್ವೇ ವಿಭಾಗೀಯ ಕಚೇರಿಗಾಗಿ ಕಲಬುರಗಿಯಲ್ಲಿ ೪೩ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೇ ಮಂತ್ರಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಶ್ಚರ್ಯಕರ ಸಂಗತಿವೆನAದರೆ ಜಮ್ಮುವಿನದಲ್ಲಿ ಇದೇ ಕಳೆದ ಜನೇವರಿ ೬ರಂದು ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆ ಮಾಡಲಾಗಿದೆ. ಆದರೆ ಇದರ ಜತೆಗಿದ್ದ ಕಲಬುರಗಿಯನ್ನು ಕೈ ಬಿಡಲಾಗಿದೆ. ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಆಗಬೇಕೆಂದು ೧೯೮೪ರಲ್ಲೇ ನ್ಯಾಯಮೂರ್ತಿ ಎಚ್.ಸಿ ಸರೀನ್ ಸಮಿತಿ, ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸೇರಿ ಹತ್ತಾರು ಸಮಿತಿಗಳು ವರದಿ ನೀಡಿವೆ. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಇದು ಸಾಕಾರಗೊಳ್ಳುತ್ತಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಕಲಬುರಗಿ ರೈಲ್ವೇ ವಿಭಾಗೀಯ ಕಚೇರಿ ಹೋರಾಟದ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಮುಖರಾದ ಶ್ರೀನಿವಾಸ ಸಿರನೂರಕರ್, ಬಸವರಾಜ ಕುನ್ನೂರ, ಆನಂದ ದಂಡೋತಿ, ಉತ್ತಮ ಬಜಾಜ್, ಸಂತೋಷ ಲಂಗರ್, ಚಂದ್ರಶೇಖರ ಕೋಬಾಳ, ಚೆನ್ನಬಸಯ್ಯ ನಂದಿಕೋಲ, ರವೀಂದ್ರ ಮಾದಮಶೆಟ್ಟಿ, ನಾಗರಾಜ ನಿಗ್ಗುಡಗಿ, ಸಂಗಮೇಶ ಕಲ್ಯಾಣಿ, ಜಗದೀಶ ಕಡಗಂಚಿ, ಶರಣಬಸಪ್ಪ ಮಚ್ಚೆಟ್ಟಿ, ಪ್ರೇಮ ಬಜಾಜ್, ಎಂ.ಎಸ್. ಪಾಟೀಲ್ ನರಿಬೋಳ, ಮಹೇಶ ಪಾಟೀಲ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಶಾಲಾ-ಕಾಲೇಜ್‌ನ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವ್ಯಾಪಕ ಪೊಲೀಸ್ ಬಂದೋಬಸ್ತ್ : ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆಗೆ ಆಗ್ರಹಿಸಿ ಕೆಕೆಸಿಸಿಐ ನೇತೃತ್ವದಲ್ಲಿ ರೈಲು ತಡೆ ಪ್ರಯತ್ನ ವಿಫಲಗೊಳಿಸಲು ವ್ಯಾಪಕ ಪೊಲೀಸ್ ಬಂದೋ¨ಸ್ತ್ ಕಲ್ಪಿಸಲಾಗಿತ್ತು. ರೈಲ್ವೇ ವಿಶೇಷ ಪಡೆಯ ಹಿರಿಯ ಅಧಿಕಾರಿಗಳು, ರೈಲ್ವೇ ಎಸ್ಪಿ ಸೌಮ್ಯಲತಾ, ಡಿಎಸ್ಪಿ ಎಸ್ ಎಸ್.ಮರಡಿ, ಕಲಬುರಗಿ ಸಿಪಿಐ ಬಸವರಾಜ ತೇಲಿ, ಪಿಎಸ್‌ಐ ವೀರಭದ್ರಪ್ಪಾ ಇವರುಗಳ ನೇತೃತ್ವದಲ್ಲಿ ರೈಲ್ವೆ ಪೋಲಿಸ್ ಇಲಾಖೆಯ ೪೮ ಸಿಬ್ಬಂದಿ, ಆರಪಿಎಫ್ ೪೦ ಹಾಗೂ ಸ್ಥಳೀಯ ೪೭ ಪೊಲೀಸ್ ಸಿಬ್ಬಂದಿ, ಡಿಎಆರ್ ತುಕಡಿ ಸೇರಿ ಸುಮಾರು ೩೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನಿಯೋಜಿಸಲಾಗಿತ್ತು.