ಕಲಬುರಗಿ ಕಾರಾಗೃಹ: ಇಬ್ಬರು ಜೈಲರ್ ಅಮಾನತು

0
19

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ದಲ್ಲಿ ಕರ್ಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಜೇಲರ್ ಗಳನ್ನು ಕರ್ತವ್ಯ ಲೋಪ ವೆಸಗಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಜೈಲರುಗಳಾದ ಪರಮಾನಂದ ಹರವಾಳ ಹಾಗೂ ಸೈನಾಜ್ ನಿಗೇವಾನ್ ಅಮಾನತುಗೊಂಡವರು. ಇತ್ತೀಚೆಗೆ ಸೆಂಟ್ರಲ್ ಜೈಲಿನಲ್ಲಿ ನಿರಂತರವಾಗಿ ಕೈದಿಗಳ ಚಲನವಲನಗಳಿಂದ‌ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ದಿಟ್ಟ ಕ್ರಮವಹಿಸಲಾಗಿದೆ ಎಂದು ಕಾರಾಗೃಹ ದ ಅಧೀಕ್ಚಕಿ ಡಾ. ಅನಿತಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Previous articleಜೋಶಿ ಅವರಿಗೆ ಕಳಂಕ ಅಂಟಿಸುವ ವಿಫಲ ಯತ್ನ
Next articleಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ಮನವಿ