ಕರ್ನಾಟಕ ಬಂದ್ ಯಾವುದೇ ಪರಿಣಾಮವಿಲ್ಲ

0
45

ಇಳಕಲ್ : ನಗರದಲ್ಲಿ ಶನಿವಾರ ದ ಕರ್ನಾಟಕ ಬಂದ್ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ
ದಿನನಿತ್ಯದ ವ್ಯಾಪಾರ ವಹಿವಾಟು ಎಂದಿನಂತೆ ನಡೆದಿತ್ತು.
ರಸ್ತೆ ಸಾರಿಗೆಯ ಬಸ್ ಗಳು ಎಂದಿನಂತೆ ಓಡಾಟ ಮಾಡಿದವು.ನಾಲ್ಕನೇ ಶನಿವಾರ ಆಗಿದ್ದರಿಂದ ಎಲ್ಲಾ ಸರಕಾರಿ ಕಚೇರಿಗಳು ಬ್ಯಾಂಕುಗಳು ರಜೆಯಲ್ಲಿ ಇದ್ದವು. ನಗರದ ಯಾವುದೇ ಸಂಘಟನೆಯಾಗಲಿ ಅವುಗಳ ಪದಾಧಿಕಾರಿಗಳಾಗಲಿ ಘೋಷಣೆಗಳನ್ನು ಕೂಗುವದಾಗಲಿ ಮೆರವಣಿಗೆ ಮಾಡುವದಾಗಲಿ ಮಾಡಲಿಲ್ಲ.
ವಿದ್ಯಾರ್ಥಿಗಳ ಭವಿಷ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆ ಸಾಂಗವಾಗಿ ನಗರದ ಮೂರೂ ಕೇಂದ್ರಗಳಲ್ಲಿ ನಡೆಯಿತು. ಹೀಗಾಗಿ ಕರ್ನಾಟಕ ಬಂದ್ ಇಳಕಲ್ ನಲ್ಲಿ ಒಟ್ಟಾರೆ ನಡೆಯಲೇ ಇಲ್ಲ ಎಂದು ಹೇಳಬಹುದು.

Previous articleಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಡೆಯದ ಬಂದ್
Next articleಚೆಂಡು ತರಲು ಹೋದ ಬಾಲಕನಿಗೆ ವಿದ್ಯುತ್ ತಗುಲಿ ತೀವ್ರ ಗಾಯ