ಕರ್ತವ್ಯ ಲೋಪ ಆರೋಪ: ಪುರಸಭೆ ಮುಖ್ಯಾಧಿಕಾರಿ ಅಮಾನತು

0
23

ದಾವಣಗೆರೆ: ಸರ್ಕಾರದ ನಿಯಮಗಳ ಪ್ರಕಾರ ಜವಾಬ್ದಾರಿ ಅರಿತು ತಮ್ಮ ಕರ್ತವ್ಯ ಹಾಗೂ ಹಣ ದುರುಪಯೋಗ , ಹಲವಾರು ಸೇವಾ ಲೋಪ ಎಸಗಿದ ಆರೋಪದ ಮೇಲೆ ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ಭಜಕ್ಕನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಆಸ್ತಿ ನೋಂದಣಿಗೆ ಡಿಜಿಟಲ್ ಇ-ಖಾತಾಗಳನ್ನು ತಿದ್ದುವ ಮೂಲಕ ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಂಕ ಶುಲ್ಕ ವಂಚನೆ ಮಾಡಲಾಗಿತ್ತು. ಮುಖ್ಯಾಧಿಕಾರಿಗಳ ಆಡಳಿತಾತ್ಮಕ ಲೋಪ ಕುರಿತು ನಡೆಸಿದ ತನಿಖೆಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಈ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ.
ತೆರವಾಗಿರುವ ಮುಖ್ಯಾಧಿಕಾರಿ ಸ್ಥಾನಕ್ಕೆ ನ್ಯಾಮತಿ ಪಟ್ಟಣ ಪಂಚಾಯತಿ ಸಮುದಾಯ ಸಂಘಟನಾಧಿಕಾರಿ ಎಸ್.ಆರ್. ವೀರಭದ್ರಯ್ಯ ಅವರನ್ನು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಇವರು ಪ್ರಭಾರ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Previous articleಮನೆಗೆ ತಡೆಗೋಡೆ ಬಿದ್ದು ಬಾಲಕಿ ಮೃತ್ಯು: ಹಲವು ಮನೆಗಳು ಜಲಾವೃತ, ಸ್ಥಳಾಂತರ
Next articleಸೌರಶಕ್ತಿ ಸಾಧನೆಯಲ್ಲಿ ದಿಯು ದೇಶದಲ್ಲೇ ಮೊದಲು