ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ ಯತ್ನಾಳ್ ಆಗ್ರಹ

0
33

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಮಾತಂತೆ ಗೃಹ ಮಂತ್ರಿಗಳ ಉಡಾಫೆ ಮಾತುಗಳು

ಬೆಂಗಳೂರು: ದರೋಡೆ ಮಾಡುತ್ತಿರುವವರ ಸುಳಿವು ಸಿಕ್ಕಲ್ಲಿ ‘ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ’ [Shoot at Sight] – ಅಪರಾಧಿಗಳಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಮಾತಂತೆ ಗೃಹ ಮಂತ್ರಿಗಳ ಉಡಾಫೆ ಮಾತುಗಳು, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಯನ್ನು normalize ಮಾಡುವ ಪ್ರವೃತ್ತಿ ಪೊಲೀಸ್ ಇಲಾಖೆಯ ಮೇಲೂ ಬಿದ್ದಂತಿದೆ. ಸಾಲು ಸಾಲು ದರೋಡೆ, ಮನೆಗಳ್ಳತನ, ಬ್ಯಾಂಕ್ ದರೋಡೆ ನಡೆಯುತ್ತಿದ್ದರೂ ಕಿಂಚಿತ್ತೂ ವಿಚಲಿತರಾಗದೆ ‘ತನಿಖೆ ಪ್ರಗತಿಯಲ್ಲಿದೆ’, ‘ ಕೃತ್ಯವೆಸಗಿದವರು ಮಾನಸಿಕ ಅಸ್ವಸ್ಥರು’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಕೊಡುತ್ತಿರುವುದು ನಿಜಕ್ಕೂ ಬೇಜವಾಬ್ದಾರಿತನದ ಪರಮಾವಧಿ. ದರೋಡೆಕೋರರಿಗೆ ಭೀತಿ ಮೂಡಿಸುವ ಕೆಲಸ ಮಾಡಿಸಿ. ರಾಜ್ಯದಲ್ಲಿ ಜನರು ಸುರಕ್ಷಿತರಾಗಿದ್ದರೆ ಎಂಬ ಭಾವನೆಯನ್ನು ಮೂಡಿಸಬೇಕಾದದ್ದು ಗೃಹ ಮಂತ್ರಿಗಳ ಕರ್ತವ್ಯ. ಕೂಡಲೇ ಜಿಲ್ಲಾವಾರು ಪೊಲೀಸ್ ಸ್ಕ್ವಾಡ್ ಗಳನ್ನೂ ರಚಿಸಿ ಮನೆಗಳ್ಳತನ, ದರೋಡೆ ಇತ್ಯಾದಿ ಕೃತ್ಯವೆಸಗಿಟ್ಟಿರುವವರ ಮೇಲೆ ಆಯುಧದ ಮೂಲಕ ಉತ್ತರಿಸಿ ಎಂದಿದ್ದಾರೆ.

Previous articleಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ?
Next articleಸಮಾಜಘಾತಕ ಶಕ್ತಿಗಳು ವಿರುದ್ಧ ಗಂಭೀರ ಕ್ರಮ