ಔಷಧಿ ಪೂರೈಕೆ ಮಾಡಿದ ಕಂಪನಿ ವಿರುದ್ದ ಕ್ರಮ

0
32

ಕೋಲಾರ : ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಬೀರವಾಗಿ ಪರಿಗಣಿಸಿದೆ. ಈಗಾಗಲೇ ಔಷದ ನಿಯಂತ್ರಣ ಇಲಾಖೆಯ ಒಬ್ಬ ಅಧಿಕಾರಿಯನ್ನು ಅಮಾನತ್ತು ಪಡಿಸಲಾಗಿದೆ ನಮ್ಮ ವ್ಯವಸ್ತೆಯ ವೈಪಲ್ಯಗಳಿಂದ ಆಗಿರುವ ಘಟನೆ ಎನ್ನಬಹುದಾಗಿದೆ ಈಗಾಗಲೇ ಒಬ್ಬರನ್ನು ಅಮಾನತ್ತು ಮಾಡಿ, ನೋಟೀಸ್ ಜಾರಿ ಮಾಡಲಾಗಿದೆ. ಔಷಧಿ ಪೂರೈಕೆ ಕಂಪನಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕೋಲಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಮುದಾಯದ ಆರೋಗ್ಯ ಕೇಂದ್ರ ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ. ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದು, ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ, ವ್ಯವಸ್ತೆ ಸರಿಪಡಿಸಲು ಪುಡ್ ಅಂಡ್ ಡ್ರಗ್ ಕಂಟ್ರೋಲ್ ಗೆ ಐ.ಎ.ಎಸ್ ಅಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿರುವಂತೆ ನಾವು ಯಾವುದೇ ಔಷಧಿ ಖರೀದಿ ಮಾಡಿಲ್ಲ, ಆರ್ ಅಶೋಕ್‌ಗೆ ಔಷದಿ ಖರೀದಿಯ ಬಗ್ಗೆ ಮಾಹಿತಿ ಇಲ್ಲದಂತಾಗಿದೆ ರಾಜ್ಯದ ಪ್ರಯೋಗಾಲಯಗಳಲ್ಲಿ ೨೨ ವಿವಿಧ ಮಾದರಿಯ ಔಷಧಿಗಳ ತಪಾಸಣೆ ನಡೆಸಿದಾಗ ರಾಜ್ಯದಲ್ಲಿ ಗುಣಮಟ್ಟ ಖಾತ್ರಿಯಾಗಲಿಲ್ಲ ಅದರೆ ಕೇಂದ್ರ ಸರ್ಕಾರದ ಅಧಿನದಲ್ಲಿರುವ ಪ್ರಯೋಗಳಲ್ಲಿ ರಾಜ್ಯದಲ್ಲಿ ಗುಣಮಟ್ಟ ಕಳೆದುಕೊಂಡಿದ್ದ ಔಷದಿಗಳು ಗುಣಮಟ್ಟದಿಂದ ಕೂಡಿದೆ ಎಂದು ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ದ ನೇರವಾಗಿ ಬೊಟ್ಟು ಮಾಡಿ ತೋರಿಸಿದರು.

ರಾಜ್ಯದ್ಯಂತ ಎಲ್ಲಾ ತಾಲ್ಲೂಕು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಗುರಿ ಹೊಂದಿದ್ದೇವೆ ಸುಮಾರು ೩೨.೫ ಕೋಟಿಗಳ ವಚ್ಚ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ೩೨೭ ಮಹಿಳೆಯರು ಮೃತ ಪಟ್ಟಿದ್ದಾರೆ. ಮಹಿಳೆಯರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಮಹಿಳೆಯರ ಸಾವಿನ ತನಿಖೆಗಾಗಿ ಆರೋಗ್ಯ ಇಲಾಖೆಯ ಸಮಿತಿ ರಚನೆ ಮಾಡುತ್ತೇವೆ. ನಿಷೇದ ಮಾಡಲಾಗಿರುವ ಔಷಧಿಗಳನ್ನು ಖರೀದಿ ಮಾಡಲಾಗಿದೆ ಎಂಬ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಯನ್ನು ಗುಂಡೂರಾವ್ ನಿರಾಕರಿಸಿದರು.

Previous articleಸಹಾಯದ ನೆಪದಲ್ಲಿ ಅತ್ಯಾಚಾರ…
Next articleಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು  ಮಾರಾಟ ಮಾಡುತ್ತಿದ್ದ ನೈಜೀರಿಯ ಪ್ರಜೆ ಸೇರಿ ಇಬ್ಬರ ಸೆರೆ