ಔರಂಗಾಬಾದ್ ಮತ್ತು ಒಸ್ಮಾನಾಬಾದ್‌ ನಗರಗಳ ಮರುನಾಮಕರಣ

0
11

ಮಹಾರಾಷ್ಟ್ರ: ಔರಂಗಬಾದ್ ನಗರವನ್ನು ಛತ್ರಪತಿ ಶಿವಾಜಿ ನಗರವೆಂದು ಮತ್ತು ಉಸ್ಮಾನಬಾದ್ ನಗರವನ್ನು ಧಾರಶಿವ್ ಎಂದು ಮರುನಾಮಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯದಿಂದ ಬಂದ ಎರಡು ಪತ್ರಗಳನ್ನು ಫಡ್ನವೀಸ್ ಅವರು ಫೆಬ್ರುವರಿ 24 ರಂದು ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎನ್‍ಸಿಪಿ ಸರ್ಕಾರವೇ ಸದನದಲ್ಲಿ ನಿರ್ಧಾರ ಕೈಗೊಂಡಿತ್ತು. ಅವರ ಸರ್ಕಾರ ಉರುಳಿ ಏಕನಾಥ್ ಶಿಂದೆ ಸರ್ಕಾರ ಬಂದಾಗ ಹಿಂದಿನ ಸರ್ಕಾರದ ನಿರ್ಧಾರವನ್ನು ಖುಲಾಸೆಗೊಳಿಸಿ, ಹೊಸ ನಿರ್ಧಾರವನ್ನು ಮಾಡಿ, ಅನುಮತಿಗಾಗಿ ಕೇಂದ್ರಕ್ಕೆ ಮನವಿ ಮಾಡಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಈ ಎರಡು ನಗರಗಳ ಹೆಸರು ಬದಲಾವಣೆಗೆ ಕೇಂದ್ರದ ಅಭ್ಯಂತರವಿಲ್ಲ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫಡ್ನವೀಸ್ ಧನ್ಯವಾದ ತಿಳಿಸಿದ್ದಾರೆ.

Previous articleಸಿಇಐಆರ್ ವೆಬ್ ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್ ಮರಳಿ ಮಾಲೀಕನ ಕೈಗೆ
Next articleಕನ್ನಡದಲ್ಲಿ ವಾದ ಮಂಡನೆ ನಾಡು ನುಡಿ ಅಭಿಮಾನದ ಸಂಕೇತ: ಸಭಾಪತಿ ಹೊರಟ್ಟಿ