ಐರಾವತ ಬಸ್‌ಗೆ ಬೆಂಕಿ: ಪ್ರಯಾಣಿಕರು ಪಾರು

0
10

ಚಿಕ್ಕಮಗಳೂರು: ಚಲಿಸುತ್ತಿದ್ದ ಐರಾವತ ಸೆಮಿಸ್ಲೀಪರ್ ಬಸ್‌ಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
೪೦ ಪ್ರಯಾಣಿಕರನ್ನು ಹೊತ್ತು ಶಿವಮೊಗ್ಗದಿಂದ ಮೈಸೂರಿಗೆ ಈ ಬಸ್ ಹೋಗುತ್ತಿತ್ತು. ಆದರೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಕ್ರಾಸ್ ಬಳಿ ಬಸ್‌ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೂಡಲೆ ಬಸ್ ನಿಲ್ಲಿಸಿದ್ದು, ಬಳಿಕ ಚಾಲಕ ಮತ್ತು ಕಂಡಕ್ಟರ್ ಮಲಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಕೂಡಲೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೂ ಬಸ್ ಸುಟ್ಟು ಕರಕಲಾಗಿದೆ.

Previous articleಅಂಕಿತಾ, ನವನೀತ್ ಓದಿದ ಶಾಲೆಗಳಿಗೆ ಒಂದೂವರೆ ಕೋಟಿ ರೂ. ಅನುದಾನ ಘೋಷಣೆ
Next articleತಂದೆಯಿಂದಲೇ ಮಗನ ಕೊಲೆ