ಐತಿಹಾಸಿಕ ಪಾಪನಾಶ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮನವಿ

0
13

ಬೆಂಗಳೂರು: ಪಾಪನಾಶ ಮಂದಿರದ ಜೀರ್ಣೋದ್ಧಾರಕ್ಕೆ ಸುಮಾರು 22 ಕೋಟಿ ರೂ.ಗಳ ಅನುದಾನ ಮಾಡಿಸುವಂತೆ ಸಾಗರ್‌ ಖಂಡ್ರೆ ಅವರು ನವ ದೆಹಲಿಯ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಬೀದರ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರದ ಪ್ರಸಾದ ಯೋಜನೆಯಡಿ ಬೀದರನ್ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪಾಪನಾಶ ಮಂದಿರ ಆಯ್ಕೆಯಾಗಿ ಮಂದಿರದ ಜೀರ್ಣೋದ್ಧಾರಕ್ಕೆ ಸುಮಾರು 22 ಕೋಟಿ ರೂ.ಗಳ ಅನುದಾನ ಘೋಷಣೆಯಾಗಿತ್ತು. ಈ ಹಿಂದೆ ಘೋಷಿದಂತೆ ಐತಿಹಾಸಿಕ ಪಾಪನಾಶ ಮಂದಿರದ ಸಂಪೂರ್ಣ ಅಭಿವೃದ್ಧಿಗಾಗಿ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದೆನು ಎಂದಿದ್ದಾರೆ.

Previous articleನೋಡಲ್ ಜಿಲ್ಲೆಯಾಗಿ ವಿಜಯಪುರ ಆಯ್ಕೆ ಮಾಡಿಕೊಂಡ ಸುಧಾಮೂರ್ತಿ
Next articleಹೊಟೇಲ್ ರೂಮಿನಲ್ಲಿ ಕುಕ್ಕರ್ ಸ್ಫೋಟ: ಹಲವರಿಗೆ ಗಾಯ