ಏರ್ ಗನ್ ನಿಂದ ಶೂಟೌಟ್: ಬಾಲಕ ಸಾವು

0
12

ಚಿಕ್ಕಮಗಳೂರು: ಮಕ್ಕಳ ಆಟಿಕೆಯಂತೆ ಬಳಕೆಯಾದ ಏರ್ ಗನ್ ನಿಂದ ಶೂಟೌಟ್ ಸಂಭವಿಸಿ ಏಳು ವರ್ಷದ ಬಾಲಕ ಮೃತಪಟ್ಟ ಘಟನೆ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲನಿಯಲ್ಲಿ ಜರುಗಿದ್ದು, ಮನೆಯಲ್ಲಿದ್ದ ಏರ್ ಗನ್ ನಿಂದ ಹಾರಿದ ಗುಂಡು ಮಗುವಿನ ಮೈಸೀಳಿ ಇಹಲೋಕ ತ್ವಜಿಸುವಂತೆ ಮಾಡಿದೆ.

ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಾಲಕ ವಿಷ್ಣುರಾಜ್ (7) ಬಾಲಕ ಏರ್ ಗನ್ ಶೂಟೌಟ್ ಗೆ ಬಲಿಯಾಗಿದ್ದಾನೆ. ಶಿಕಾರಿಗೆಂದಿ ಮನೆಯಲ್ಲಿದ್ದ ಏರ್ ಗನ್ ನಿಂದ ಹಾರಿದ ಗುಂಡು ಪುಟ್ಟ ಮಗುವಿನ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿದೆ.

ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಏರ್ ಗನ್ ಇಟ್ಟಿದ್ದರು ಎನ್ನಲಾಗಿದ್ದು, ಅಕ್ಕಪಕ್ಕದ ಮನೆಯ ಮಕ್ಕಳು ಆಟವಾಡುವಾಗ ಗನ್ ತಗೆದುಕೊಂಡು ಹುಡುಗಾಟವಾಡುವ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಬೇರೆ ಕಾರಣದಿಂದ ಕೂಡ ಬಂದೂಕಿನಿಂದ ಫೈರ್ ಆಗಿರಬಹುದೆಂದು ಹೇಳಲಾಗುತ್ತದೆ.

ಮನೆಯವರ ನಿರ್ಲಕ್ಷತನದಿಂದ ಇದೀಗ ಏಳು ವರ್ಷದ ಬಾಲಕ ಮೃತಪಟ್ಟಿದ್ದು, ಮೃತ ಬಾಲಕನ ಸಂಬಂಧಿ ಕನ್ವರ್ ಎಂಬಾತ ನೀಡಿರುವ ದೂರಿನ ಆಧಾರದ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಎಫ್‌ಐಆ‌ರ್ ದಾಖಲು ಮಾಡಿದ್ದಾರೆ, ಬಾಲಕನ ಸಾವಿಗೆ ನಿಖರ ಕಾರಣವೇನೆಂದು ಪೊಲೀಸ್ ತನಿಖೆಯಿಂದ ಅಷ್ಟೇ ತಿಳಿದು ಬರಬೇಕಿದೆ.

Previous articleಈದುಲ್ ಫಿತ್ರ …… ಪದವಿ ದಾನ ಸಂಭ್ರಮ
Next articleಮೇಲ್ಸೇತುವೆಯಿಂದ ಜಿಗಿದು ಕೆಪಿಟಿಸಿಎಲ್‌ ಗುತ್ತಿಗೆ ನೌಕರ ಆತ್ಮಹತ್ಯೆ